‘ರಾಬರ್ಟ್’ ರಿಲೀಸ್ ಗೆ ಅಡ್ಡಿ: ತೆಲುಗು ಚಿತ್ರರಂಗದ ಹೊಸನೀತಿ ವಿರುದ್ಧ ದೂರು…. ಬೆಂಗಳೂರು,ಜನವರಿ,29,2021(..):ನಟ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ರಾಬರ್ಟ್​’ ಮಾರ್ಚ್​ 11ರಂದು ರಿಲೀಸ್ ಆಗಲಿದೆ. ಈ ಮಧ್ಯೆ ದರ್ಶನ್ ಟಾಲಿವುಡ್ ಪ್ರವೇಶಕ್ಕೆ ವಿಘ್ನ ಉಂಟುಮಾಡುವ ಪ್ರಯತ್ನ ನಡೆದಿದೆ. ಈ ಬಗ್ಗೆ ಚಾಲೆಂಜಿಂಗ್ ಸ್ಟಾರ್ ಕಿಡಿಕಾರಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಭಾಷೆಯಲ್ಲೂ ಈ ಚಿತ್ರ ಬಿಡುಗಡೆಗೆ ಸಿದ್ಧತೆ ನಡೆದಿತ್ತು. ಆದರೆ ಆಂಧ್ರಪ್ರದೇಶದಲ್ಲಿ ರಾಬರ್ಟ್ ಚಿತ್ರ ಬಿಡುಗಡೆಗೆ ಅಡ್ಡಿಯುಂಟಾಗಿದೆ. ಇನ್ನು ತೆಲುಗು ಚಿತ್ರರಂಗದ ಹೊಸನೀತಿ ವಿರುದ್ಧ ನಿರ್ಮಾಪಕರು ಚಲನಚಿತ್ರ ವಾಣಿಜ್ಯ ಮಂಡಳಿಗೆ ಲಿಖಿತ ದೂರು ಸಲ್ಲಿಕೆ ಮಾಡಿದ್ದಾರೆ. ನಿರ್ಮಾಪಕರಿಗೆ ನಟ ದರ್ಶನ್ ಸಾಥ್ ನೀಡಿದ್ದಾರೆ. ಈ ನಡುವೆ ರಾಬರ್ಟ್ ರಿಲೀಸ್ ಗೆ ಕ್ಯಾತೆ ತೆಗೆದ ಟಾಲಿವುಡ್​ ವಿರುದ್ಧ ನಟ ದರ್ಶನ್ ಗರಂ ಆಗಿದ್ದು, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಶುಕ್ರವಾರ ಸಭೆ ನಡೆದು ತೆಲುಗು ಚಿತ್ರರಂಗದ ಹೊಸನೀತಿ ವಿರುದ್ಧ ದೂರು ನೀಡಲಾಗಿದೆ. ಈ ಕುರಿತು ಸಮಸ್ಯೆ ಬಗೆಹರಿಸುವುದಾಗಿ ಫಿಲ್ಮಂ ಛೇಂಬರ್ ಅಧ್ಯಕ್ಷ ಜೈರಾಜ್ ತಿಳಿಸಿದ್ದಾರೆ. : - -- –- –