ಮತ್ತೆ ಸಂಪುಟ ಪುನರಚನೆ ವೇಳೆ ಒಳ್ಳೆಯ ಖಾತೆ ಸಿಗುವ ವಿಶ್ವಾಸವಿದೆ- ಸಚಿವ ಆನಂದ್ ಸಿಂಗ್.. ಬೆಂಗಳೂರು,ಜನವರಿ,29,2021(..):ನನ್ನ ಖಾತೆ ಬದಲಾವಣೆ ಮಾಡಿದಾಗ ಬೇಸರವಾಗಿದ್ದೆ ಅಷ್ಟೆ. ಮುಂದೆ ಸಂಪುಟ ಪುನರಚನೆ ಮಾಡುವುದಾಗಿ ಸಿಎಂ ತಿಳಿಸಿದ್ದಾರೆ. ಆ ವೇಳೆ ಒಳ್ಳೆಯ ಖಾತೆ ಸಿಗುವ ವಿಶ್ವಾಸವಿದೆ ಎಂದು ಸಚಿವ ಆನಂದ್ ಸಿಂಗ್ ತಿಳಿಸಿದರು. ಇಂದು ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾದ ಬಳಿಕ ಮಾಧ್ಯಮದ ಜತೆ ಮಾತನಾಡಿದ ಸಚಿವ ಆನಂದ್ ಸಿಂಗ್, ನನಗೆ ಕೊಟ್ಟಿರುವ ಖಾತೆಯ ಬಗ್ಗೆ ಅಸಮಾಧಾನವಿಲ್ಲ. ನನಗೆ ನೀಡಿರುವ ಖಾತೆಯಿಂದ ತೃಪ್ತಿಯಿದೆ. ರಾಜೀನಾಮೆ ನೀಡೋದಿಲ್ಲ ಎಂಬುದಾಗಿ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ. ಸಿಎಂ ಕೊಟ್ಟ ಖಾತೆಯನ್ನು ನಿಷ್ಠೆಯಿಂದ ನಿರ್ವಹಿಸುವೆ. ಖಾತೆಗಳಲ್ಲಿ ದೊಡ್ಡದು ಚಿಕ್ಕದು ಅನ್ನೋದಿಲ್ಲ. ಮುಂದೆ ಸಂಪುಟ ವಿಸ್ತರಣೆ ಮಾಡುವುದಾಗಿ ತಿಳಿಸಿದ್ದಾರೆ. ಆಗ ಒಳ್ಳೆಯ ಖಾತೆ ನೀಡುವ ಭರವಸೆಯಿದೆ. ನನಗೆ ಖಾತೆಯ ಬಗ್ಗೆ ಅಸಮಾಧಾನವೂ ಇಲ್ಲ, ರಾಜೀನಾಮೆ ನೀಡೋದು ಇಲ್ಲ ಎಂದು ಸ್ಪಷ್ಟನೆ ನೀಡಿದರು. : – -- - - .