ಕೋವಿಡ್ 19 ನಿಯಮ ಉಲ್ಲಂಘನೆ: ಸಂಕಷ್ಟ ತಂದುಕೊಂಡ ರೊನಾಲ್ಡೊ ಬೆಂಗಳೂರು, ಜನವರಿ 29, 2020 (..):ಕೋವಿಡ್ 19 ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಕ್ರಿಸ್ಟಿಯಾನೊ ರೊನಾಲ್ಡೊ ವಿಚಾರಣೆ ಎದುರಿಸಿದ್ದಾರೆ. ಇಟಾಲಿಯನ್ ಕಾನೂನು ಪ್ರಕಾರ “ಆರೆಂಜ್ ವಲಯ”ದಲ್ಲಿ ಕಾರಣವಿಲ್ಲದ ಪ್ರಯಾಣ ನಿಷೇಧವಿದೆ. ಆದರೆ, ರೊಡ್ರಿಗಸ್‌ನ 27 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುವ ಸಲುವಾಗಿ ಈ ಜೋಡಿ ಕೋವಿಡ್ ನಿಯಮಾವಳಿ ವಿರುದ್ಧ ನಡೆದುಕೊಂಡಿದ್ದಾರೆ ಎಂದು ಎನ್ನಲಾಗಿದೆ. ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ, ರೊನಾಲ್ಡೊ ಮತ್ತು ರೊಡ್ರಿಗಸ್ ಇಬ್ಬರೂ ದಂಡವನ್ನು ತೆರಬೇಕಾಗಿದೆ.