ವಿದ್ಯಾರ್ಥಿಗಳಿಗೆ ಮತ್ತೆ ಗುಡ್ ನ್ಯೂಸ್ : ಬಸ್ ಪಾಸ್ ಅವಧಿ ವಿಸ್ತರಿಸಿದ ಕೆಎಸ್ ಆರ್ ಟಿಸಿ… ಬೆಂಗಳೂರು,ಜನವರಿ,29,2021(..):ಕೆಎಸ್ ಆರ್ ಟಿಸಿ ವತಿಯಿಂದ ವಿದ್ಯಾರ್ಥಿಗಳಿಗೆ ಮತ್ತೆ ಗುಡ್ ನ್ಯೂಸ್ ಸಿಕ್ಕಿದೆ. ಹೌದು, ರಾಜ್ಯ ರಸ್ತೆ ಸಾರಿಗೆ ನಿಗಮ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿಯನ್ನು ವಿಸ್ತರಿಸಿದೆ. ಫೆಬ್ರವರಿ 28ರವರೆಗೆ ಬಸ್ ಪಾಸ್ ಅವಧಿ ವಿಸ್ತರಿಸಿದ್ದು, ಕಳೆದ ವರ್ಷದ ಪಾಸ್ ನಲ್ಲಿಯೇ ಫೆಬ್ರವರಿ ಕೊನೆಯವರೆಗೆ ವಿದ್ಯಾರ್ಥಿಗಳ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಳೆದ ಸಾಲಿನ ಪಾಸ್ ನೊಂದಿಗೆ ಶಾಲಾ ಕಾಲೇಜುಗಳ ರಸೀದಿ ತೋರಿಸಿ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸಲು ಅನುಮತಿ ನೀಡಲಾಗಿದೆ. ಸಂಸ್ಥೆಯ ಎಲ್ಲಾ ಚಾಲನಾ ಸಿಬ್ಬಂದಿಗೆ ಈ ಕುರಿತು ಮಾಹಿತಿ ನೀಡಿ ದೂರುಗಳಿಗೆ ಅವಕಾಶ ನೀಡದೆ ಕ್ರಮವಹಿಸುವಂತೆ ಪ್ರಕಟಣೆಯಲ್ಲಿ ಸೂಚನೆ ನೀಡಲಾಗಿದೆ. ಹಾಗೆಯೇ ವಿದ್ಯಾರ್ಥಿಗಳು ಸೇವಾಸಿಂಧು ಮೂಲಕ ಪ್ರಸಕ್ತ ವರ್ಷದ ದಾಖಲಾತಿಗಳನ್ನು ಸಲ್ಲಿಸಿ ನೂತನ ಪಾಸ್ ಪಡೆಯುವಂತೆ ಕೆಎಸ್ ಆರ್ ಟಿಸಿ ವತಿಯಿಂದ ಮಾಹಿತಿ ನೀಡಲಾಗಿದೆ. … : , . 29, 2021 (..): ’ . ’ 28. ’ 28 . ’ / . , , . ’ .: / / / : - – - - - - .