ಮ್ಯಾನ್ ಹೋಲ್ ಸ್ವಚ್ಛಗೊಳಿಸುವ ವೇಳೆ ಇಬ್ಬರು ಕಾರ್ಮಿಕರು ಸಾವು… ಕಲ್ಬುರ್ಗಿ,ಜನವರಿ,28,2021(..): ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ಇಳಿದಿದ್ದ ವೇಳೆ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಕಲ್ಬುರ್ಗಿಯಲ್ಲಿ ನಡೆದಿದೆ. ಕಲ್ಬುರ್ಗಿಯ ಕೈಲಾಶ್ ನಗರದಲ್ಲಿ ಈ ಘಟನೆ ನಡೆದಿದೆ. ಲಾಲ್ ಅಹ್ಮದ್(25),ರಷೀದ್(30) ಮೃತಪಟ್ಟವರು. ಮತ್ತೋರ್ವ ರಾಜು ಎಂಬವವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಒಳಚರಂಡಿ ಕಟ್ಟಿಕೊಂಡಿದ್ದ ಹಿನ್ನೆಲೆಯಲ್ಲಿ ಅದನ್ನ ಸ್ವಚ್ಛಗೊಳಿಸಲು ಮ್ಯಾನ್ ಹೋಲ್ ಗೆ ಇಳಿದಿದ್ದರು. ಲಾಲ್ ಅಹ್ಮದ್, ,ರಷೀದ್, ಹಾಗೂ ರಾಜು 18 ಅಡಿ ಆಳದಲ್ಲಿ ಇಳಿದು ಕೆಲಸ ಮಾಡುತ್ತಿದ್ದರು. ಈ ವೇಳೆ ಉಸಿರುಗಟ್ಟಿ ಇಬ್ಬರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇದಕ್ಕೆ ಜಲಮಂಡಳಿ ನಿರ್ಲಕ್ಷ್ಯಕಾರಣ ಎಂಬ ಆರೋಪ ಕೇಳಿ ಬಂದಿದೆ. : –- -- -