ರಿಷಬ್ ‘ ಬೆಲ್ ಬಾಟಂ -ಪಾರ್ಟ್ 2’ ಗೆ ತಾನ್ಯಾ ಹೋಪ್ ಎಂಟ್ರಿ..! ಬೆಂಗಳೂರು, ಜ.28, 2021 : (.. ) ನಟ ರಿಷಬ್ ಶೆಟ್ಟಿ ಹಾಗೂ ಹರಿಪ್ರಿಯಾ ಅಭಿನಯದ ಸೂಪರ್ ಹಿಟ್ ಸಿನಿಮಾ ‘ಬೆಲ್ ಬಾಟಮ್’ ಪರಭಾಷೆಗಳಲ್ಲೂ ರಿಮೇಕ್ ಆಗುವ ಮೂಲಕ ಸದ್ದು ಮಾಡಿತ್ತು. ಇದೀಗ ಸಿನಿಮಾ ಪಾರ್ಟ್ 2 ಅವತಾರದಲ್ಲಿ ಮತ್ತೆ ಸೆಟ್ಟೇರಿದೆ. ಗೋಲ್ಡನ್ ಹಾರ್ಸ್ ಸಂಸ್ಥೆಯ ಮೂಲಕ ಬೆಲ್ ಬಾಟಮ್ ಎಂಬ ಹೊಸತನದ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದ ಸಂತೋಷ್ ಮತ್ತು ಸಂದೀಪ್ ಈಗ ಬೆಲ್ ಬಾಟಮ್-2 ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾಗೂ ದಯಾನಂದ ಟಿ.ಕೆ. ಅವರೇ ಕಥೆ ಬರೆದು, ಜಯತೀರ್ಥ ಜಯಣ್ಣ ನಿರ್ದೇಶಿಸುತ್ತಿದ್ದಾರೆ. ರಿಷಬ್ ಶೆಟ್ಟಿ, ಹರಿಪ್ರಿಯಾ ಜತೆಗೆ ತಾನ್ಯಾ ಹೋಪ್ ಬೆಲ್ ಬಾಟಮ್ ನ ಪಾರ್ಟ್ 2 ನಲ್ಲಿ ಪ್ರಮಖ ಪಾತ್ರದಲ್ಲಿರುವುದು ಚಿತ್ರದ ವಿಶೇಷ.ಕನ್ನಡದ ಪ್ರತಿಭಾವಂತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಈ ಸಿನಿಮಾಕ್ಕೆ ಸಂಗೀತ ನೀಡುತ್ತಿದ್ದಾರೆ. ಬಹುತೇಕ ಬೆಲ್ ಬಾಟಂ ಮೊದಲ ಭಾಗದಲ್ಲಿದ್ದ ತಂಡವೇ ಎರಡನೇ ಭಾಗದಲ್ಲೂ ಮುಂದುವರೆದಿದೆ. “ದಿ ಕ್ಯೂರಿಯಸ್ ಕೇಸ್ ಆಫ್ ಚೆಂಡೂವ” ಪಾರ್ಟ್ 2 ಟ್ಯಾಗ್ ಲೈನ್ ಸಖತ್ ಡಿಫರೆಂಟ್ ಆಗಿದದ್ದು, ಸಿನಿಮಾ ಬಗ್ಗೆ ಕುತೂಹಲ ಮೂಡಿಸಿದೆ. ಬೆಲ್ ಬಾಟಂ ತಂಡಕ್ಕೆ ಜಸ್ಟ್ ಕನ್ನಡದ ವತಿಯಿಂದ ————- : ----2-