ಅಲ್ಲು ಅರ್ಜುನ್+ವಿಜಯ್ ದೇವರಕೊಂಡ ! ಮತ್ತೊಂದು ಸ್ಟಾರ್ ಕಾಂಬೋ! ಬೆಂಗಳೂರು, ಜನವರಿ 27, 2021 (..):ಟಾಲಿವುಡ್ನಲ್ಲಿ ಮತ್ತೊಂದು ಮಲ್ಟಿಸ್ಟಾರ್ ಚಿತ್ರ ರೆಡಿಯಾಗಲಿದೆ! ಯೆಸ್, ಸ್ಟಾರ್ ನಟರಾದ ಅಲ್ಲು ಅರ್ಜುನ್ ಮತ್ತು ವಿಜಯದೇವರಕೊಂಡ ಒಟ್ಟಿಗೆ ಚಿತ್ರ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ವಿಭಿನ್ನ ಥೀಮ್ ನೊಂದಿಗೆ ಈ ಚಿತ್ರವನ್ನು ಬೃಹತ್ ಬಜೆಟ್ ನಲ್ಲಿ ನಿರ್ಮಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಚಿತ್ರಕ್ಕೆ ಮಹೇಶ್ ವಿ.ರಾಘವ್ ಆ್ಯಕ್ಸನ್ ಕಟ್ ಹೇಳುತ್ತಿದ್ದಾರೆ. ಈ ಮೂಲಕ ಇತ್ತೀಚಿಗೆ ಸ್ಟಾರ್ ನಟರು ಒಟ್ಟಿಗೆ ನಟಿಸುತ್ತಿರುವ ಚಿತ್ರಗಳ ಸರಣಿಗೆ ಅಲ್ಲು ಅರ್ಜುನ್ ಹಾಗೂ ವಿಜಯದೇವರಕೊಂಡ ಕೂಡ ಸೇರ್ಪಡೆಯಾಗಿದ್ದಾರೆ.