ಲೂಸಿಯಾ ಪವರ್ ಜತೆ ಅಮಲಾ ಪೌಲ್ ‘ವೆಬ್ ಸಿರೀಸ್’ ಬೆಂಗಳೂರು, ಜನವರಿ 27, 2021 (..):ಲೂಸಿಯಾ, ಯು ಟರ್ನ್ ಖ್ಯಾತಿಯ ಪವನ್ ಕುಮಾರ್ ಅವರು ನಟಿ ಅಮಲಾ ಪೌಲ್ ಅವರ ಜೊತೆ ವೆಬ್ ಸರಣಿ ಮಾಡಲು ಹೊರಟಿದ್ದಾರೆ. ಹೌದು. ಕಾಜಲ್ ಅಗರ್ವಾಲ್, ಸಮಂತಾ ಅಕ್ಕಿನೇನಿ , ತಮನ್ನಾ, ನಂತರ ಅಮಲಾ ಪೌಲ್ ಕೂಡ ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ. ವಿಶೇಷ ಎಂದರೆ ಇದರ ನೇತೃತ್ವ ಕನ್ನಡ ನಟ, ನಿರ್ದೇಶಕ ಪವನ್ ಕುಮಾರ್ ವಹಿಸಿಕೊಳ್ಳುತ್ತಿದ್ದಾರೆ. ಈ ವೆಬ್ ಸರಣಿಯು ಒಟ್ಟು 8 ಸಂಚಿಕೆಗಳನ್ನು ಹೊಂದಿದೆ. ದೊಡ್ಡ ಬಜೆಟ್ ನಲ್ಲಿ ಈ ವೆಬ್ ಸೀರಿಸ್ ಅನ್ನು ನಿರ್ಮಿಸಲಾಗುತ್ತಿದೆ.