ತೆಲುಗಿನಲ್ಲೂ ಚಾಲೆಂಜಿಂಗ್ ಸ್ಟಾರ್ ‘ರಾಬರ್ಟ್’ ರಿಲೀಸ್ ಬೆಂಗಳೂರು, ಜನವರಿ 27, 2021 (..):ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ರಿಲೀಸ್ ಡೇಟ್ ಈಗಾಗಲೇ ಘೋಷಣೆಯಾಗಿದೆ. ವಿಶೇಷ ಎಂದರೆ ಚಿತ್ರ ತೆಲುಗಿನಲ್ಲಿ ಸಹ ಮಾರ್ಚ್ 11 ರಂದು ಬಿಡುಗಡೆಯಾಗುತ್ತಿದೆ. ಹೊಸ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಗಣರಾಜ್ಯೋತ್ಸವದಂದು ಈ ವಿಷಯವನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಸಿನಿಮಾ ಬಿಡುಗಡೆ ಘೋಷಿಸಿದ ನಿರ್ದೇಶಕ ತರುಣ್ ಕಿಶೋರ್ ಸುಧೀರ್, ಮುಂದಿನ ದಿನಗಳಲ್ಲಿ ತೆಲುಗಿನ ಟೀಸರ್ ಬಿಡುಗಡೆಯಾಗಲಿದೆ ಎಂದಿದ್ದಾರೆ.