“ಕೃಷಿ ಸಚಿವ ಬಿ.ಸಿ.ಪಾಟೀಲ್ ರಾಜೀನಾಮೆಗೆ ಮಾಜಿ ಸಚಿವ ಎಚ್.ಸಿ.ಮಹಾದೇವಪ್ಪ ಒತ್ತಾಯ” ಮೈಸೂರು,ಜನವರಿ,27,2021(..): ಪ್ರತಿಭಟನಾಕಾರರು ಭಯೋತ್ಪಾದಕರು. ಅವರಿಗೆ ಪಾಕ್ ಬೆಂಬಲವಿದೆ ಎಂಬ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ ನೀಡಿರುವ ಕೃಷಿ ಕೃಷಿ ಸಚಿವ ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಎಚ್.ಸಿ.ಮಹಾದೇವಪ್ಪ ಒತ್ತಾಯಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಕೃಷಿ ಸಚಿವರ ತರಾಟೆಗೆ ತೆಗೆದುಕೊಂಡ ಮಾಜಿ ಸಚಿವ ಎಚ್.ಸಿ.ಮಹಾದೇವಪ್ಪ, ಕೃಷಿ ಸಚಿವನಾಗಿರೋದು ರೈತರ ಸಂಕಷ್ಟ ಕೇಳಲೆಂದೇ ಹೊರತು ಅವರಿಗೆ ಭಯೋತ್ಪಾದಕ ಪಟ್ಟ ನೀಡಲು ಅಲ್ಲ ಎಂದು ಕಿಡಿಕಾರಿದ್ದಾರೆ.ಈ ಕೂಡಲೇ ಬಿ.ಸಿ.ಪಾಟೀಲ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಟ್ವಿಟ್ಟರ್ ನಲ್ಲಿ ಆಗ್ರಹಿಸಿದ್ದಾರೆ. : --..--- -..