56 ಇಂಚಿನ ಎದೆ ಇದ್ದರೆ ಸಾಲದು: ರೈತರ ಕಣ್ಣೀರಿಗೆ ಸ್ಪಂದಿಸುವ ಗುಣವಿರಬೇಕು- ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ಗುಡುಗು.. ಬೆಂಗಳೂರು,ಜನವರಿ,27,2021(..):ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ರೈತರು ಪ್ರತಿಭಟನೆ, ಹಿಂಸಾಚಾರ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಸಿಎಂ ಸಿದ್ಧರಾಮಯ್ಯ ಗುಡುಗಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ವಿಪಕ್ಷ ನಾಯಕ ಸಿದ್ಧರಾಮಯ್ಯ, ರೈತರು ಚಳಿ ಬಿಸಿಲು ಎನ್ನದೇ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಧಾನಿ ಮೋದಿ 56 ಇಂಚಿನ ಎದೆ ಇದೆ ಎನ್ನುತ್ತಾರೆ. ಆದರೆ ಎದೆ ಇದ್ದರೇ ಸಾಲದು. ಅದರೊಳಗೆ ಹೃದಯವಿರಬೇಕು. ರೈತರ ಕಣ್ಣೀರೊರೆಸುವ ಗುಣವಿರಬೇಕು ಎಂದು ಕಿಡಿಕಾರಿದರು. ಕೃಷಿ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯಲ್ಲ ಎಂದು ಅಂಬಾನಿ ಅದಾನಿಗೆ ಪ್ರಧಾನಿ ಮೋದಿ ಮಾತು ಕೊಟ್ಟಿದ್ದಾರೆ. ಹೀಗಾಗಿ ಹಿಂಪಡೆಯುತ್ತಿಲ್ಲ. ಪ್ರಧಾನಿ ಮೋದಿ ಅಂಬಾನಿ ಅದಾನಿಯ ಗುಲಾಮರಾಗಿದ್ದಾರೆ. ಕಣ್ಣೊರೆಸುವ ತಂತ್ರವಾಗಿ ರೈತರ ಜತೆ ಸಭೆ ನಡೆಸಿದ್ದಾರೆ. 11 ಬಾರಿ ರೈತರ ಜತೆ ಮಾತುಕತೆ ನಡೆಸಿದ್ದಾರೆ. ಸಮಸ್ಯೆ ಇತ್ಯಾರ್ಥಕ್ಕೆ 11 ಬಾರಿ ಚರ್ಚಿಸಬೇಕೆ..? ಎಂದು ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು. …. 56″ , ’ : , . 27, 2021 (..): ’ .’ , . , , “ . 56″ . , .”“ . , . . . 11 . 11 ?” .: / / 56″ : 56- –- - – - -