“ರೈತ ಹೋರಾಟ, ಬಿಜೆಪಿಗರು ಇಂದು ಮೌನಿಯಾಗಿರುವುದು ಏಕೆ?” : ಕಾಂಗ್ರೆಸ್ ನಾಯಕ ಯು.ಟಿ.ಖಾದರ್ ಬೆಂಗಳೂರು,ಜನವರಿ,27,2021(..) :ರೈತರು ದೆಹಲಿಯ ಬೀದಿ ಬೀದಿಗಳಲ್ಲಿ ಹೋರಾಟ ಮಾಡುತ್ತಿದ್ದಾರೆ. ಅಂದು ಮಾತೆತ್ತಿದರೆ ಮನಮೋಹನ್ ಸಿಂಗ್ ರನ್ನು ಮೌನಿಬಾಬಾ ಎಂದು ಟೀಕಿಸುತ್ತಿದ್ದ ಬಿಜೆಪಿಗರು ಇಂದು ಮೌನಿಯಾಗಿರುವುದು ಏಕೆ? ಎಂದು ಕಾಂಗ್ರೆಸ್ ನಾಯಕ ಯು.ಟಿ.ಖಾದರ್ ಕಿಡಿಕಾರಿದ್ದಾರೆ.ದೆಹಲಿಯ ರೈತರ ಹೋರಾಟದಲ್ಲಿ ಸಾವು ನೋವುಗಳು ಸಂಭವಿಸುತ್ತಿದ್ದು, ನಿಜಕ್ಕೂ ದುಃಖಕರ. ಸಮಾಜವನ್ನ ನಿರ್ಲಕ್ಷಿಸಿದಾಗ ಅಧಃಪತನ ಆರಂಭ ಎಂಬ ಸ್ವಾಮಿ ವಿವೇಕಾನಂದರ ಮಾತನ್ನ ಈ ಸಂದರ್ಭದಲ್ಲಿ ನೆನಪಿಸಲು ಬಯಸುವೆ ಎಂದು ಬಿಜೆಪಿ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದಾರೆ. : ------?--