ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ದಿನಾಂಕ ಮುಂದೂಡಿಕೆ ದುಬೈ, ಜನವರಿ 26, 2021 (..):ಮೊದಲ ಆವೃತ್ತಿಯ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ 8 ದಿನ ಮುಂದೂಡಲಾಗಿದೆ. ಭಾರತ ತಂಡ ಫೈನಲ್‌ನಲ್ಲಿ ಆಡುವ ಸಾಧ್ಯತೆ ದಟ್ಟವಾಗಿರುವುದರಿಂದ ಈ ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ. ಸದ್ಯ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಯಾದಿಯಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್‌ ಮೊದಲೆರಡು ಸ್ಥಾನದಲ್ಲಿವೆ. ಐತಿಹಾಸಿಕ ಲಾರ್ಡ್ಸ್‌ನಲ್ಲಿ ಈ ಮುಖಾಮುಖೀ ಜೂ. 18ರಿಂದ 22ರ ತನಕ ತನಕ ಸಾಗಲಿದೆ. ಜೂ. 23 ಮೀಸಲು ದಿನವಾಗಿದೆ. ಈ ಮೊದಲು ನಿರ್ಧರಿಸಿದಂತೆ ಪ್ರಶಸ್ತಿ ಸಮರ ಜೂ. 10ರಿಂದ 14ರ ತನಕ ನಡೆಯಬೇಕಿತ್ತು.