ನಾಳೆ ಸಿಎಂಗೆ ರಾಜೀನಾಮೆ ಪತ್ರ ಕಳುಹಿಸುವೆ : ಸಚಿವ ಮಾಧುಸ್ವಾಮಿ ಬೆಂಗಳೂರು,ಜನವರಿ,25,2021(..): ಖಾತೆ ಬದಲಾವಣೆ ಸಂಬಂಧಿಸಿದಂತೆ ಅಸಮಾಧಾನಗೊಂಡಿರುವ ಸಚಿವ ಮಾಧುಸ್ವಾಮಿ ನಾಳೆ ಸಿಎಂಗೆ ರಾಜೀನಾಮೆ ಪತ್ರ ಕಳುಹಿಸುತ್ತೇನೆ ಅಂಗೀಕರಿಸಿ ಎಂದು ಬೇಸರವ್ಯಕ್ತಪಡಿಸಿದ್ದಾರೆ.ಪದೇ ಪದೇ ಖಾತೆ ಅದಲು-ಬದಲು ಮಾಡುತ್ತಿರುವುದರಿಂದ ಬೇಸರಗೊಂಡಿರುವ ಸಚಿವ ಮಾಧುಸ್ವಾಮಿ, ಸಿಎಂ ಯಡಿಯೂರಪ್ಪ ವಿರುದ್ಧ ಅಸಮಾಧಾನವ್ಯಕ್ತಪಡಿಸಿದ್ದಾರೆ.ನಾಳೆ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಬಳಿಕ ಮಧ್ಯಾಹ್ನ ಸಚಿವ ಸ್ಥಾನಕ್ಕೆ ರಾಜೀನಾಮೆಯ ಪತ್ರ ಕಳುಹಿಸುತ್ತೇನೆ. ಅದನ್ನು ಅಂಗೀಕರಿಸೋದು, ಸಿಎಂ ಯಡಿಯೂರಪ್ಪ ಅವರಿಗೆ ಬಿಟ್ಟದ್ದು ಎಂದು ತಿಳಿಸಿದ್ದಾರೆ. : ------