ರಾಗಿ ಸ್ವಚ್ಛ (ಸೆಲ್ಲಿಂಗ್) ಮಾಡುವ ಯಂತ್ರಕ್ಕೆ ಸಿಲುಕಿ ವ್ಯಕ್ತಿ ಸಾವು ಮೈಸೂರು,ಜನವರಿ,25,2021(..): ರಾಗಿ ಸ್ವಚ್ಛ (ಸೆಲ್ಲಿಂಗ್) ಮಾಡುವ ಯಂತ್ರಕ್ಕೆ ಸಿಲುಕಿ ವ್ಯಕ್ತಿ ಮೃತಪಟ್ಟಿದ್ದಾರೆ.ಪಿರಿಯಾಪಟ್ಟಣ ತಾಲೂಕಿನ ಬಿಲ್ಲಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಬಿಲ್ಲಹಳ್ಳಿ ಗ್ರಾಮದ ರಾಜು (35) ಮೃತ ದುರ್ದೈವಿಯಾಗಿದ್ದಾರೆ. ಭಾನುವಾರ ರಾತ್ರಿ ತಮ್ಮ ಜಮೀನಿನಲ್ಲಿ ರಾಗಿ ಸ್ವಚ್ಛಗೊಳಿಸುವ ವೇಳೆ ಆಯತಪ್ಪಿ ರಾತು ಯಂತ್ರಕ್ಕೆ ಸಿಲುಕಿದ್ದಾರೆ. ಯಂತ್ರದ ಮಾಲೀಕ ಮುರುಗೇಶ್ ಅವರ ಬೇಜವಾಬ್ದಾರಿತನದಿಂದ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ.ಸುರಕ್ಷತಾ ಕ್ರಮ ಅನುಸರಿಸದೆ ಇರುವುದು ಘಟನೆ ನಡೆದಿದೆ ಎಂದು ಎಂದು ಸಹೋದರ ರಮೇಶ್ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ಮುರುಗೇಶ್ ಮೇಲೆ ಪಿರಿಯಾಪಟ್ಟಣ ಪೊಲೀಸರಿಂದ ದೂರು ದಾಖಲಾಗಿದೆ. : ------