ಮಂಗಳೂರು ಪ್ಲಾಸ್ಟಿಕ್‌ ಪಾರ್ಕ್ ಗೆ ಕೇಂದ್ರದಿಂದ 40 ಕೋಟಿ : ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಬೆಂಗಳೂರು,ಜನವರಿ,24,2021(..) :ಸ್ವಾವಲಂಬಿ ಭಾರತ ಯೋಜನೆಯಡಿ ದೇಶದ ಪ್ಲಾಸ್ಟಿಕ್ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ದೇಶದಲ್ಲಿ ಎರಡು ಪ್ಲಾಸ್ಟಿಕ್‌ ಪಾರ್ಕ್ ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ. ಕರ್ನಾಟಕದ ಕರಾವಳಿ ನಗರ ಮಂಗಳೂರು ಹಾಗೂ ಉತ್ತರ ಪ್ರದೇಶದ ಗೋರಕ್ ಪುರದಲ್ಲಿ ತಲಾ ಒಂದೊಂದು ಪ್ಲಾಸ್ಟಿಕ್‌ ಪಾರ್ಕ್‌ ಸ್ಥಾಪಿಸುವ ಬಗ್ಗೆ ಮೊನ್ನೆ ನಡೆದ ರಾಸಾಯನಿಕ ಇಲಾಖೆಯ ಯೋಜನೆ ಚಾಲನಾ ಸಮಿತಿ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಿದ್ದೇವೆ ಎಂದರು. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಮಾಹಿತಿ ನೀಡಿದ್ದೇವೆ. ಆದಷ್ಟು ಬೇಗ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಿ ಅಂತಿಮ ಒಪ್ಪಿಗೆ ಸಲ್ಲಿಸುವಂತೆ ರಾಜ್ಯ ಸರರ್ಕಾರಕ್ಕೆ ತಿಳಿಸಲಾಗಿದೆ. ಆರು ತಿಂಗಳ ಒಳಗೆ ಅಂತಿಮ ಒಪ್ಪಿಗೆ ನೀಡಿ ಯೋಜನೆಯ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು. ಪ್ಲಾಸ್ಟಿಕ್‌ ಪಾರ್ಕ್‌ ಅಂದರೆ ಏನು? ಎಂದು ಬಹಳ ಜನರಿಗೆ ಕುತೂಹಲವಿದೆ. ಇದೊಂದು ಪ್ಲಾಸ್ಟಿಕ್‌ ಸಂಬಂಧಿತ ಕೈಗಾರಿಕೆಗಳಿಗೆ ಸೀಮಿತವಾದ ಕೈಗಾರಿಕಾಭಿವೃದ್ಧಿ ಕೇಂದ್ರ. ಪ್ಲಾಸ್ಟಿಕ್‌ ಸಂಬಂಧಿತ ಕೈಗಾರಿಕೆಗಳ ಅಭಿವೃದ್ಧಿಗೆ ಬೇಕಾದ ಎಲ್ಲ ಆಧುನಿಕ ತಂತ್ರಜ್ಞಾನ ಸೌಕರ್ಯಗಳೂ ಇಲ್ಲಿರುತ್ತವೆ. ಇವು ಸಾಮಾನ್ಯ ಸೌಲಭ್ಯಗಳಾಗಿದ್ದು ( ). ಇಲ್ಲಿ ಸ್ಥಾಪಿತವಾಗುವ ಎಲ್ಲ ಕೈಗಾರಿಕಾ ಘಟಕಗಳೂ ಈ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು. ಇದರಿಂದ ನಮ್ಮ ಸ್ವದೇಶಿ ಪ್ಲಾಸ್ಟಿಕ್‌ ಕೈಗಾರಿಕೆಗಳು ಅಂತಾರಾಷ್ಟ್ರೀಯ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಬಹುದು. ಆಗ ನಮ್ಮ ಕಂಪನಿಗಳು ಜಾಗತಿಕ ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸಲು ಶಕ್ತವಾಗುತ್ತವೆ. ತಂತಾನೆ ರಫ್ತು ವೃದ್ಧಿಯಾಗುತ್ತದೆ ಎಂದು ಕೇಂದ್ರ ಸಚಿವರು ವಿವರಿಸಿದರು. ಇದೊಂದು ಜಂಟಿ ಯೋಜನೆಯಾಗಿದೆ. ರಾಜ್ಯವು ಈ ಯೋಜನೆಯನ್ನು ಈಗಾಗಲೇ ಅಸ್ತಿತ್ವದಲ್ಲಿರುವ ಕೆಎಸ್‌ಐಡಿಸಿ ಮೂಲಕ ಅಥವಾ ಹೊಸ ವಿಶೇಷ ಉದ್ದೇಶದ ಕಂಪನಿ () ಸ್ಥಾಪಿಸುವ ಮೂಲಕ ಅನುಷ್ಠಾನಗೊಳಿಸಬಹುದಾಗಿದೆ. ಈ ಪ್ಲಾಸ್ಟಿಕ್‌ ಪಾರ್ಕ್‌ ನಲ್ಲಿ ಅಭಿವೃದ್ಧಿಪಡಿಸುವ ಸಾಮಾನ್ಯ ಸೌಕರ್ಯಗಳ ( ) ಅರ್ಧ ವೆಚ್ಚವನ್ನು ನಮ್ಮ ಇಲಾಖೆಯು ಭರಿಸುತ್ತದೆ. ಇದಕ್ಕೆ 40 ಕೋಟಿ ರೂಪಾಯಿ ನಿಗದಿಪಡಿಸಲಾಗಿದ್ದು, ನಾಲ್ಕು ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು. ಆದಷ್ಟು ಬೇಗ ಡಿಪಿಆರ್‌ ಕಳುಹಿಸಿಕೊಡಿ ಎಂದು ರಾಜ್ಯಕ್ಕೆ ಕೇಳಿಕೊಂಡಿದ್ದೇವೆ. ನಾನು ಕೂಡಾ ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರಯಯತ್ತಿದ್ದೇನೆ ಎಂದು ಸಚಿವರು ತಿಳಿಸಿದರು. ಭಾರತವನ್ನು ಎಲ್ಲ ಕ್ಷೇತ್ರಗಳಲ್ಲೂ ಸ್ವಾವಲಂಬಿಯಾಗಿ ರೂಪಿಸಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ತುಂಬಾ ಯೋಜಿತವಾಗಿ ಹೆಜ್ಜೆ ಇಡುತ್ತಿದೆ. ದೇಶದ ರಸಗೊಬ್ಬರ ವಲಯವನ್ನು ಸಂಪೂರ್ಣವಾಗಿ ಸ್ವಾವಲಂಬಿ ಮಾಡಬೇಕು ಎಂದು ನಮ್ಮ ರಸಗೊಬ್ಬರ ಇಲಾಖೆಯು ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. 4 ರಸಗೊಬ್ಬರ ಕಾರ್ಖಾನೆ ಪುನಶ್ಚೇತನಕ್ಕೆ 50ಸಾವಿರ ಕೋಟಿ ವಿವಿಧ ಕಾರಣಗಳಿಗಾಗಿ ಸ್ಥಗಿತಗೊಂಡಿದ್ದ ನಾಲ್ಕು ರಸಗೊಬ್ಬರ ಕಾರ್ಖಾನೆಗಳನ್ನು ಪುನಶ್ಚೇತನ ಗೊಳಿಸಲಾಗುತ್ತಿದ್ದು, ಇದಕ್ಕಾಗಿ 50 ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚು ಹಣ ವೆಚ್ಚಮಾಡಲಾಗುತ್ತಿದೆ. ಈ ಪೈಕಿ ರಾಮಗುಂಡಮ್‌ ಸ್ಥಾವರದ ಕೆಲಸ ಬಹುತೇಕ ಮುಗಿದಿದ್ದು ಯೂರಿಯಾ ಉತ್ಪಾದನೆಗೆ ಸಜ್ಜಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ಅದೇ ರೀತಿ ಔಷಧ ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬಿ ಮಾಡಲು ನಾನು ನಿರ್ವಹಿಸುವ ಔಷಧ ಇಲಾಖೆಯು ಹಲವು ಯೋಜನೆಗಳನ್ನು ರೂಪಿಸಿದೆ. ಈ ಉಪಕ್ರಮಗಳಲ್ಲಿ ಮೂರು ಬಲ್ಕ್‌ ಡ್ರಗ್‌ ಪಾರ್ಕ್‌ ಗಳು ಹಾಗೂ ನಾಲ್ಕು ಮೆಡಿಕಲ್‌ ಡಿವೈಸ್‌ ಪಾರ್ಕ್‌ ಗಳು ಸೇರಿವೆ ಎಂದು ತಿಳಿಸಿದರು. : - --40 - --..