ಖಾತೆ ಬದಲಾವಣೆ : ಸಚಿವ ಆನಂದ್ ಸಿಂಗ್ ಅಸಮಾಧಾನ ಬೆಂಗಳೂರು,ಜನವರಿ,25,2021(..): ಪ್ರವಾಸೋದ್ಯಮ ಖಾತೆ ಹಿಂಪಡೆಯುತ್ತಿರುವುದಕ್ಕೆ ಸಚಿವ ಆನಂದ್ ಸಿಂಗ್ ಬೇಸರಗೊಂಡಿದ್ದು, ರಾಜೀನಾಮೆ ನೀಡುವುದಾಗಿ ಆಪ್ತರೊಂದಿಗೆ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. ಸಿಎಂ ಬಿ.ಎಸ್.ವೈ ಖಾತೆ ಮತ್ತೆ ಖಾತೆ ಬದಲಾವಣೆ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತು ಹಿರಿಯ ಸಚಿವರ ಜೊತೆಗೂ ಚರ್ಚೆ ನಡೆಸಿದ್ದು, ಗಣರಾಜ್ಯೋತ್ಸವದ ಬಳಿಕ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. : ---- -