ಬಿಜೆಪಿಯಲ್ಲಿ ಅಸಮಾಧಾನಿತರು ಇಲ್ಲ, ಎಲ್ಲವನ್ನೂ ಸರಿಪಡಿಸಿದ್ದೇನೆ ಎಂದ ನಳಿನ್ ಕುಮಾರ್ ಬೆಂಗಳೂರು, ಜನವರಿ 24, ಜನವರಿ 2021 (..):ಬಿಜೆಪಿಯಲ್ಲಿ ಸದ್ಯ ಯಾವ ಅಸಮಾಧಾನಿತರು ಇಲ್ಲ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಸಮಾಧಾನಗೊಂಡಿದ್ದರೋ ಅವರೊಂದಿಗೆ ನಾನೇ ಖುದ್ದು ಮಾತನಾಡಿ ಸಮಾಧಾನ ಪಡಿಸಿದ್ದೇನೆ ಎಂದು ಕಟೀಲ್ ತಿಳಿಸಿದ್ದಾರೆ. ರೆಸಾರ್ಟ್‌ಗೆ ಹೋದರೆ ತಪ್ಪೇನೂ. ನಾನು ಹೋಗುತ್ತೇನೆ. ನಾನು ನಿನ್ನೆ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದೆ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.