ಕೊಡಗಿನ ನೂತನ ಜಿಲ್ಲಾಧಿಕಾರಿಯಾಗಿ ಚಾರುಲತಾ ಸೋಮಲ್ ಅಧಿಕಾರ ಸ್ವೀಕಾರ. ಕೊಡಗು, ಜ.23, 2021 : (.. ) ನೂತನ ಜಿಲ್ಲಾಧಿಕಾರಿಯಾಗಿ ಚಾರುಲತಾ ಸೋಮಲ್ ಶನಿವಾರ ಅಧಿಕಾರ ಸ್ವೀಕರಿಸಿದರು. ಈ ಮೊದಲು ಜಿಲ್ಲಾಧಿಕಾರಿಯಾಗಿದ್ದ ಐಎಎಸ್ ಅಧಿಕಾರಿ ಅನೀಸ್‌ ಕಣ್ಮಣಿ ಅವರು ಸುದೀರ್ಘ ರಜೆ ಮೇಲೆ ತೆರಳಿರುವ ಕಾರಣ ಹುದ್ದೆ ಖಾಲಿಯಾಗಿತ್ತು. ಬಳಿಕ ಆ ಜಾಗದಲ್ಲಿ ಪ್ರಭಾರ ಜಿಲ್ಲಾಧಿಕಾರಿಯಾಗಿ‌ ಭನ್ವರ್ ಸಿಂಗ್ ಮೀನಾ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ನೂತನ ಜಿಲ್ಲಾಧಿಕಾರಿಯಾಗಿ ಚಾರುಲತಾ ಸೋಮಲ್ ಇಂದು ಬೆಳಗ್ಗೆ ಅಧಿಕಾರ ಸ್ವೀಕರಿಸಿದರು. ಚಾರುಲತ ಸೋಮಲ್ , ಈ ಹಿಂದೆ ಕೊಡಗು ಜಿಪಂ‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ () ಯಾಗಿ ಕಾರ್ಯ ನಿರ್ವಹಿಸಿದ್ದರು. ——- : -----