ನೋಡಲು ಆಸಿಸ್ ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾಗೆ ಆಹ್ವಾನಿಸಿದ ಟ್ರಿಪಲ್ ಹೆಚ್ ಬೆಂಗಳೂರು, ಜನವರಿ 23, 2021 (..): ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿ ಗೆದ್ದ ಟೀಂ ಇಂಡಿಯಾವನ್ನು ಡಬ್ಲ್ಯೂಡಬ್ಲ್ಯೂಇ ದಂತಕತೆ, ಅಮೆರಿಕಾದ ಟ್ರಿಪಲ್ ಹೆಚ್‌ ಮೆಚ್ಚಿದ್ದಾರೆ. ಸರಣಿಯಲ್ಲಿ ಟೀಮ್ ಇಂಡಿಯಾದ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ ಸ್ಕ್ರಿಪ್ಟ್ ರೀತಿಯಲ್ಲೇ ಭಾರತ ಕಮ್‌ಬ್ಯಾಕ್‌ ಮಾಡಿತು, ಅದ್ಭುತ ರೀತಿಯಲ್ಲಿ ಟೆಸ್ಟ್ ಸರಣಿ ಗೆದ್ದಿತು. ಹೀಗಾಗಿ ಜನವರಿ 26ರಂದು ನಡೆಯೋ ಸೂಪರ್‌ಸ್ಟಾರ್ ಸ್ಪೆಕ್ಟ್ಯಾಕಲ್ ಪಂದ್ಯ ವೀಕ್ಷಿಸಲು ಭಾರತ ತಂಡವನ್ನು ಆಹ್ವಾನಿಸುತ್ತಿದ್ದೇನೆ ಎಂದಿದ್ದಾರೆ. ಜನವರಿ 26ರ ವಿಶೇಷವಾಗಿ ಭಾರತದ ಮೂಲದ ಸೂಪರ್​ ಸ್ಟಾರ್ ರೆಸ್ಲರ್​​ಗಳೊಂದಿಗೆ ವಿಶೇಷ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.