ಟ್ಯಾಕ್ಟರ್ ಗೆ ಬೈಕ್ ಡಿಕ್ಕಿ : ಬೈಕ್ ಸವಾರ ಗಂಭೀರ ಗಾಯ ಮೈಸೂರು,ಜನವರಿ,22,2021(..): ಟ್ಯಾಕ್ಟರ್ ಗೆ ಬೈಕ್ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ. ಟಿ.ನರಸೀಪುರ ತಾಲ್ಲೂಕಿನ ಆರ್.ಪಿ ಹುಂಡಿ ಬಳಿ ದುರ್ಘಟನೆ ನಡೆದಿದೆ. ಆರ್.ಪಿ.ಹುಂಡಿ ಗ್ರಾಮದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ರಾಕ್ಟರ್ ಗೆ ಬೈಕ್ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಬೈಕ್ ಚಾಲಕ ಮುತ್ತತ್ತಿ ಗ್ರಾಮದ 25 ವರ್ಷದ ಉದಯ್ ಮತ್ತು ಹಿಂಬದಿ ಸವಾರ 23 ವರ್ಷದ ಲೋಕೇಶ್ ಗಂಭೀರ ಗಾಯಗೊಂಡವರಾಗಿದ್ದಾರೆ. ಸಾವು ಬದುಕಿನ ನಡುವೆ ಹೋರಾಡುತ್ತಿರುವ ಗಾಯಾಳುಗಳನ್ನು ಚಿಕಿತ್ಸೆಗೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಗಾಯಾಳುಗಳ ಸಂಬಂಧಿಕರ ಆಕ್ರಂದನ ಘಟನಾ ಸ್ಥಳದಲ್ಲಿ ಮುಗಿಲು ಮುಟ್ಟಿದೆ. 40 ನಿಮಿಷ ಕಳೆದರು ಸ್ಥಳಕ್ಕಾಗಮಿಸದ 108 ವಾಹನ. ಆಸ್ಪತ್ರೆಗೆ ಸಾಗಿಸಲು ಸ್ಥಳೀಯ ಆಟೋ ಚಾಲಕರು ಹಿಂದೇಟು ಹಾಕಿದ್ದಾರೆ. ಟಿ.ನರಸೀಪುರ ಪೊಲೀಸ್ ಠಾಣಾ ವ್ಯಾಪ್ತಿಯಯಲ್ಲಿ ಘಟನೆ ನಡೆದಿದೆ. : ------