ಇಂದು ಮೈಸೂರಿಗೆ ಸಿಎಂ ಬಿಎಸ್ ವೈ: ಮೇಯರ್ ಚುನಾವಣೆ ಕುರಿತು ಮಾತುಕತೆ ಸಾಧ್ಯತೆ…. ಮೈಸೂರು,ಜನವರಿ,23,2021(..):ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸುತ್ತಿದ್ದು, ಮೈಸೂರು ಮೇಯರ್ ಚುನಾವಣೆ ಮತ್ತಷ್ಟು ಕಾವೇರಿದೆ. ಇಂದು ಮೈಸೂರಿಗೆ ಆಗಮಿಸುವ ಸಿಎಂ ಯಡಿಯೂರಪ್ಪ ಜೊತೆ ನಗರ ಬಿಜೆಪಿ ಅಧ್ಯಕ್ಷರ ನೇತೃತ್ವದಲ್ಲಿ ಸ್ಥಳೀಯ ಬಿಜೆಪಿ ನಾಯಕರು ಮೈಸೂರು ಮೇಯರ್ ಚುನಾವಣೆ ಸಂಬಂಧ ಮಾತುಕತೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಇನ್ನೆರಡು ಮೂರು ದಿನಗಳಲ್ಲಿ ಮೇಯರ್-ಉಪಮೇಯರ್ ಗೆ ಮೀಸಲಾತಿ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಮೇಯರ್ ಚುನಾವಣೆ ಮತ್ತಷ್ಟು ಕಾವೇರಿದೆ. ಈ ಮಧ್ಯೆ ನೂರಕ್ಕೆ ನೂರುರಷ್ಟು ಬಿಜೆಪಿಯವರೇ ಮೇಯರ್ ಎಂದು ಎಸ್ ಟಿ ಸೋಮಶೇಖರ್ ಹೇಳಿಕೆ ನೀಡಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ, ಹೀಗಾಗಿ ರಾಜ್ಯದಲ್ಲಿ ಆದಂತೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಬ್ರೇಕ್ ನೀಡುತ್ತಾ ಬಿಜೆಪಿ ಎಂಬ ಪ್ರಶ್ನೆ ಎದ್ಧಿದೆ. : - - - – - -