ಎಂಸಿ&ಎ ಸಂಸ್ಥೆಗೆ ನಿವೇಶನವನ್ನು ಮಂಜೂರು ಮಾಡುವಂತೆ ಸಂಸದರಿಗೆ ಎಂಸಿ&ಎ ಸಂಸ್ಥೆಯ ಅಧ್ಯಕ್ಷರಾದ ಸಿ.ಮುನಿಕೃಷ್ಣರಿಂದ ಮನವಿ ಸಲ್ಲಿಕೆ… ಮೈಸೂರು,ಜನವರಿ,22,2021(..):ಮಾರ್ಕೆಟಿಂಗ್‍ ಕಮ್ಯುನಿಕೇಷನ್ & ಅಡ್ವಟೈಸಿಂಗ್ ಲಿ., (ಕರ್ನಾಟಕ ಸರ್ಕಾರದ ಒಂದು ಉದ್ಯಮ)ದ ನೂತನ ಅಧ್ಯಕ್ಷರಾದ ಸಿ. ಮುನಿಕೃಷ್ಣ ಅವರು ಇಂದು ಮೈಸೂರು ಜಿಲ್ಲಾ ಪ್ರವಾಸಕೈಗೊಂಡಿದ್ದರು. ಮೈಸೂರಿಗೆ ಆಗಮಿಸಿದ ಅವರನ್ನು ಎಂಸಿ&ಎ, ಮೈಸೂರು ಶಾಖಾ ಕಛೇರಿಯ ವತಿಯಿಂದ ಸ್ವಾಗತಿಸಲಾಯಿತು. ಮೈಸೂರಿನ ಸಂಸದರಾದ ಪ್ರತಾಪ್‍ಸಿಂಹ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜೀವ್‍ರವರನ್ನು ಎಂಸಿ&ಎ ಸಂಸ್ಥೆಯ ಅಧ್ಯಕ್ಷ ಸಿ.ಮುನಿಕೃಷ್ಣರವರು ಭೇಟಿ ಮಾಡಿ ಎಂಸಿ&ಎ ಸಂಸ್ಥೆಗೆ ನಿವೇಶನವನ್ನು ಮಂಜೂರು ಮಾಡುವಂತೆ ಮನವಿ ಸಲ್ಲಿಸಿದರು.. : – & - -