ನಾಳೆ ಸಿಎಂ ಬಿಎಸ್ ವೈರಿಂದ ಮೈಸೂರು ಮತ್ತು ಶಿವಮೊಗ್ಗ ಜಿಲ್ಲಾ ಪ್ರವಾಸ: ಕಾರ್ಯಕ್ರಮಗಳ ಪಟ್ಟಿ ಹೀಗಿದೆ… ಬೆಂಗಳೂರು,ಜನವರಿ,22,2021(..):ನಾಳೆ(ಜನವರಿ23) ಸಿಎಂ ಬಿಎಸ್ ಯಡಿಯೂರಪ್ಪ ಮೈಸೂರು ಮತ್ತು ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿದ್ದು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ನಾಳೆ ಬೆಳಿಗ್ಗೆ 10 ಗಂಟೆಗೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿನಿಂದ ಹೊರಡಲಿರುವ ಸಿಎಂ ಬಿಎಸ್ ಯಡಿಯೂರಪ್ಪ 10.50ಕ್ಕೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಬಳಿಕ ಇಲ್ಲಿಂದ ಜೆಪಿ ನಗರ ಶರಣ ವೇದಿಕೆ(ರಿ) ಮೈಸೂರು ಇವರ ವತಿಯಿಂದ ಜೆಪಿನಗರದ ಅಕ್ಕಮಹಾದೇವಿ ಮಂದಿರದಲ್ಲಿ ಆಯೋಜಿಸಿರುವ ಅಕ್ಕಮಹಾದೇವಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ತದ ನಂತರ ಮಧ್ಯಾಹ್ನ 12 ಗಂಟೆ ವೇಳೆಗೆ ಮಹರ್ಷಿ ಶಾಲೆ ಮತ್ತು ಡಿಎವಿ ಶಾಲೆಯ ಮಕ್ಕಳಿಂದ ಮನವಿ ಸ್ವೀಕರಿಸಲಿರುವ ಸಿಎಂ ಬಿಎಸ್ ಯಡಿಯೂರಪ್ಪ ಬಳಿಕ ಅಲ್ಲಿಂದ ವಿಜಯನಗರ ಮೊದಲ ಹಂತದಲ್ಲಿ ಬಸವ ಸಮಿತಿ, ಹೆಬ್ಬಾಳು-ವಿಜಯನಗರ ಇವರ ವತಿಯಿಂದ ಆಯೋಜಿಸಿರುವ ಬಸವ ಭವನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ 2.30ಕ್ಕೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಿ ಸಿಎಂ ಬಿಎಸ್ ವೈ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಶಿವಮೊಗ್ಗ ಜಿಲ್ಲೆಗೆ ಪ್ರಯಾಣ ಬೆಳೆಸಲಿದ್ದಾರೆ. ಶಿವಮೊಗ್ಗದ ಸರ್ಕ್ಯೂಟ್ ಹೌಸ್ ಹೆಲಿಪ್ಯಾಡ್ ಗೆ ಆಗಮಿಸುವ ಸಿಎಂ ಬಿಎಸ್ ವೈ, ರಾತ್ರಿ 7.30ಕ್ಕೆ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರ ಪುತ್ರ ಆಯನೂರು ಸಂತೋಷ್ ಮತ್ತು ಲಾವಣ್ಯ ಇವರ ಆರತಕ್ಷತೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಶಿವಮೊಗ್ಗದಲ್ಲೇ ಸಿಎಂ ಬಿಎಸ್ ವೈ ವಾಸ್ತವ್ಯ ಹೂಡಲಿದ್ದಾರೆ. … , . 22, 2021 (..): .. ( 23) . 10.00 10.50 . 2.30 .: .. / : – – - – -