ಜುಲೈ 23ರಿಂದ ಒಲಿಂಪಿಕ್ ಕ್ರೀಡಾಕೂಟ: ಮುಂದೂಡಿಕೆ ಸುದ್ದಿ ಸುಳ್ಳು ಎಂದ ಐಒಸಿ ಬೆಂಗಳೂರು, 22 ಜನವರಿ, 2021 (..):ಒಲಿಂಪಿಕ್ ಕ್ರೀಡಾಕೂಟ ಜುಲೈ 23ಕ್ಕೆ ಆರಂಭವಾಗಲಿದೆ. ಒಲಿಂಪಿಕ್ಸ್ ಕ್ರೀಡೆಯನ್ನು ಮುಂದೂಡಲಾಗುತ್ತಿದೆ ಎಂಬ ವರದಿಯನ್ನು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ) ತಳ್ಳಿ ಹಾಕಿದೆ. ಐಒಸಿ ಅಧ್ಯಕ್ಷ ಥಾಮಸ್ ಬಚ್ ಮತ್ತು ಸ್ಥಳೀಯ ಸಂಘಟಕರು ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಈ ಹಿಂದೆ ಕ್ರೀಡಾಕೂಟವನ್ನು 10 ತಿಂಗಳುಗಳ ಕಾಲ ಮುಂದೂಡಲಾಗಿತ್ತು. ಇದೀಗ ಮತ್ತೆ ಪಂದ್ಯ ಆಯೋಜನೆಗೆ ಧಕ್ಕೆ ಎದುರಾಗಿದೆಯೇ ಎಂಬ ಆತಂಕ ಉಂಟಾಗಿದೆ. ಆದರೆ ಈ ಸುದ್ದಿಯನ್ನು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ನಿರಾಕರಿಸಿದೆ.