ಕಾಶ್ಮೀರದಲ್ಲಿ ರಕ್ಷಿತ್ ಶೆಟ್ಟಿ ‘777 ಚಾರ್ಲಿ’ ಕ್ಲೈಮ್ಯಾಕ್ಸ್ ಶೂಟಿಂಗ್ ಬೆಂಗಳೂರು, ಜನವರಿ 21, 2021 (..):ಕಾಶ್ಮೀರದಲ್ಲಿ ರಕ್ಷಿತ್​ ಶೆಟ್ಟಿ ‘777 ಚಾರ್ಲಿ’ ಚಿತ್ರದ ಕ್ಲೈಮ್ಯಾಕ್ಸ್​ ಚಿತ್ರೀಕರಣ ಆರಂಭವಾಗಿದೆ. ಲಾಕ್​ಡೌನ್​ ಸಡಿಲಗೊಂಡ ನಂತರ ಮತ್ತೆ ಶೂಟಿಂಗ್​ ಆರಂಭಿಸಿರುವ ಚಿತ್ರತಂಡ ಈಗಾಗಲೇ ಕೊಡೈಕೆನಾಲ್, ಹಿಮಾಚಲ ಪ್ರದೇಶ ಹಾಗೂ ಕಾಶ್ಮೀರದಲ್ಲಿಲ್ಲಿ ಶೂಟಿಂಗ್​ ಮುಗಿಸಿದೆ. ಚಾರ್ಲಿ ಚಿತ್ರತಂಡ ಮೊನ್ನೆಯೇ ಕಾಶ್ಮೀರ ಸೇರಿಕೊಂಡಿದ್ದು, ಅಲ್ಲಿ ಸಿನಿಮಾದ ಕ್ಲೈಮ್ಯಾಕ್ಸ್​ ಶೂಟಿಂಗ್​ಗೆ ಎಲ್ಲ ಸಿದ್ಧತೆ ನಡೆಸಿದೆ. ಕಾಶ್ಮೀರಕ್ಕೆ ಹೋಗುತ್ತಿದ್ದಂತೆಯೇ ಚಿತ್ರದ ನಿರ್ದೇಶಕ ಕಿರಣ್​ ರಾಜ್​ ಕೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್​ ಮಾಡಿದ್ದರು. ಕಾಶ್ಮೀರದಲ್ಲಿ ಸಂಚರಿಸುತ್ತಿರುವ ವಿಡಿಯೋವನ್ನು ರಕ್ಷಿತ್ ಇನ್​ಸ್ಟಾಗ್ರಾಂ ಸ್ಟೋರೀಸ್​ನಲ್ಲಿ ಹಂಚಿಕೊಂಡಿದ್ದಾರೆ.