7 ನೂತನ ಸಚಿವರಿಗೆ ಖಾತೆ ಹಂಚಿಕೆ: ಹಲವು ಸಚಿವರ ಖಾತೆ ಬದಲಾವಣೆ…? ಬೆಂಗಳೂರು ಬೆಂಗಳೂರು,ಜನವರಿ,21,2021(..):ನೂತನ 7 ಮಂದಿ ಸಚಿವರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಖಾತೆ ಹಂಚಿಕೆಗೆ ಮಾಡಿದ್ದು, ಜತೆಗೆ ಹಲವು ಸಚಿವರ ಖಾತೆ ಬದಲಾವಣೆ ಮಾಡಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪನೇತೃತ್ವದ ಸಂಪುಟ ವಿಸ್ತರಣೆಯಲ್ಲಿ 7 ಶಾಸಕರು ನೂತನ ಸಚಿವರಾಗಿ ಸಂಪುಟ ಸೇರಿದ್ದಾರೆ. ಎಸ್. ಅಂಗಾರ, ಸಿ.ಪಿ. ಯೋಗೇಶ್ವರ್, ಎಂ.ಟಿ.ಬಿ. ನಾಗರಾಜ್, ಆರ್.ಶಂಕರ್, ಅರವಿಂದ ಲಿಂಬಾವಳಿ, ಮುರುಗೇಶ ನಿರಾಣಿ, ಉಮೇಶ್ ಕತ್ತಿ ಸೇರಿ 7 ಮಂದಿ ನೂತನ ಸಚಿವರಾಗಿದ್ದಾರೆ. ಇನ್ನು ಹಾಲಿ ಇರುವ ಕನಿಷ್ಠ 10 ಖಾತೆಗಳು ಅದಲುಬದಲಾಗಿದ್ದು, ಸಿಎಂ ಬಿಎಸ್ ವೈ ಈಗಾಗಲೇ ಖಾತೆ ಪಟ್ಟಿಯನ್ನ ರಾಜಭವನಕ್ಕೆ ಕಳುಹಿಸಿದ್ದಾರೆ ಎನ್ನಲಾಗಿದೆ ಯಾವ ಸಚಿವರಿಗೆ ಯಾವ ಖಾತೆ? ಸಂಭಾವ್ಯ ಪಟ್ಟಿ ಇಲ್ಲಿದೆ ಬಸವರಾಜ ಬೊಮ್ಮಾಯಿ- ಗೃಹ, ಕಾನೂನು, ಸಂಸದೀಯ ವ್ಯವಹಾರ ಜೆ.ಸಿ. ಮಾಧುಸ್ವಾಮಿ -ವೈದ್ಯಕೀಯ ಶಿಕ್ಷಣ, ಕನ್ನಡ-ಸಂಸ್ಕೃತಿ ಇಲಾಖೆ ಸಿ.ಸಿ. ಪಾಟೀಲ್-ಸಣ್ಣ ಕೈಗಾರಿಕೆ, ವಾರ್ತಾ ಇಲಾಖೆ ಎಸ್ ಅಂಗಾರ- ಮೀನುಗಾರಿಕೆ, ಬಂದರು ಕೋಟಾ ಶ್ರೀನಿವಾಸ ಪೂಜಾರಿ-ಮುಜರಾಯಿ, ಹಿಂದುಳಿದ ವರ್ಗಗಳ ಕಲ್ಯಾಣ ಉಮೇಶ್ ಕತ್ತಿ -ಆಹಾರ, ನಾಗರಿಕ ಪೂರೈಕೆ ಇಲಾಖೆ ಅರವಿಂದ ಲಿಂಬಾವಳಿ-ಅರಣ್ಯ ಮುರುಗೇಶ್ ನಿರಾಣಿ- ಗಣಿ, ಭೂ ವಿಜ್ಞಾನ ಎಂಟಿಬಿ ನಾಗರಾಜ್- ಅಬಕಾರಿ ಡಾ.ಕೆ. ಸುಧಾಕರ್-ಆರೋಗ್ಯ ಆನಂದ್ ಸಿಂಗ್ -ಪ್ರವಾಸೋದ್ಯಮ, ಪರಿಸರ ಇಲಾಖೆ ಸಿ.ಪಿ. ಯೋಗೇಶ್ವರ್ -ಸಣ್ಣ ನೀರಾವರಿ ಆರ್. ಶಂಕರ್-ಪೌರಾಡಳಿ ಹಾಗೂ ರೇಷ್ಮೆ ಇಲಾಖೆ ಗೋಪಾಲಯ್ಯ-ತೋಟಗಾರಿಕೆ, ಸಕ್ಕರೆ ಕೆ.ಸಿ. ನಾರಾಯಣ ಗೌಡ- ಯುವ ಸಬಲೀಕರಣ, ಕ್ರೀಡೆ, ಹಜ್ ಮತ್ತು ವಕ್ಫ್ ಖಾತೆ ನೀಡಲಾಗಿದೆ ಎನ್ನಲಾಗುತ್ತಿದೆ. : - - - -