ನಾಳೆ ‘ಫ್ಯಾಂಟಮ್’ ಟೀಂ ನೀಡಲಿದೆ ಬಿಗ್ ನ್ಯೂಸ್ ! ಬೆಂಗಳೂರು, ಜನವರಿ 20, 2021 (..):ಫ್ಯಾಂಟಮ್ ಸಿನಿಮಾದ ಬಗ್ಗೆ ಸುದ್ದಿಯೊಂದು ವೈರಲ್ ಆಗಿದೆ. ಚಿತ್ರದ ಟೈಟಲ್ ಬದಲಾಗಲಿದೆ ಎನ್ನಲಾಗುತ್ತಿದೆ. ಜನವರಿ 21ರಂದು ಚಿತ್ರದ ಬಗ್ಗೆ ಬಿಗ್ ಅಪ್ ಡೇಟ್ ನೀಡುವುದಾಗಿ ಚಿತ್ರತಂಡ ಬಹಿರಂಗಪಡಿಸಿದೆ. ಈ ಬಗ್ಗೆ ಕಿಚ್ಚ ಅಭಿಮಾನಿಗಳು ಕುತೂಹಲಭರಿತರಾಗಿದ್ದಾರೆ. ಚಿತ್ರದ ಟೈಟಲ್ ಬದಲಾವಣೆ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ.ಸಿನಿಮಾದ ಟ್ರೈಲರ್ ಮತ್ತು ಹಾಡುಗಳ ರಿಲೀಸ್ ಬಗ್ಗೆಯೂ ಚಿತ್ರತಂಡ ಮಾಹಿತಿ ನೀಡಲೂಬಹುದು ಎನ್ನಲಾಗಿದೆ.