ಅಂಧನ ಬಾಳಿಗೆ ಬೆಳಕಾದ ‘ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ’ ಬೆಂಗಳೂರು, ಜನವರಿ 20, 2021 (..):ಸಾಕಷ್ಟು ಸಮಾಜಸೇವಾ ಕಾರ್ಯಗಳನ್ನು ಮಾಡುತ್ತಿರುವ ‘ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ’ ಅಂಧ ವ್ಯಕ್ತಿಗೆ ನೆರವಾಗಿದೆ. ಹೌದು. ‘ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ’ ಅಂಧ ವ್ಯಕ್ತಿಯೊಬ್ಬನ ಬಾಳಿಗೆ ಬೆಳಕಾಗುವ ಪ್ರಯತ್ನ ಮಾಡಿದ್ದಾರೆ. ಗುಲ್ಬರ್ಗ ಜಿಲ್ಲೆಯ ಔರಾದ್ ಗ್ರಾಮದ ಅಂಧ ಯುವಕ ಸಾಯಿನಾಥ್‌ ಗೆ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ ವತಿಯಿಂದ ನೆರವು ದೊರೆತಿದೆ. ನೆರವಿನ ರೂಪದಲ್ಲಿ ಹಣವನ್ನು ನಿರಾಕರಿಸಿದ ಯುವಕ, ತನಗೆ ಒಂದು ಮೈಕ್ ಹಾಗೂ ಒಂದು ಸ್ಪೀಕರ್ ಬೇಕೆಂದು ಕೇಳಿದ್ದಾನೆ.