ಇದು ಕಾಂಗ್ರೆಸ್ ಹೋರಾಟವಲ್ಲ: ರೈತರ ಹೋರಾಟ-ಡಿಕೆ ಶಿವಕುಮಾರ್… ಬೆಂಗಳೂರು,ಜನವರಿ,20,2021(..):ಕೇಂದ್ರ ಸರ್ಕಾರದ ನೂತನ ಕೃಷಿಕಾಯ್ದೆ ಮತ್ತು ಬೆಲೆ ಏರಿಕೆ ಖಂಡಿಸಿ ರಾಜ್ಯ ಕಾಂಗ್ರೆಸ್ ಇಂದು ರಾಜಭವನ ಚಲೋ ಹಮ್ಮಿಕೊಂಡಿದ್ದು ಈ ಕುರಿತು ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇದು ಕಾಂಗ್ರೆಸ್ ಹೋರಾಟವಲ್ಲ. ರೈತರ ಹೋರಾಟ ಎಂದ್ದಿದ್ದಾರೆ. ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, ಈ ದೇಶದ ರೈತರನ್ನ ಉಳಿಸುವ ಕೆಲಸವನ್ನ ನಾವು ಮಾಡಬೇಕಿದೆ. ಇಂದು ರಾಜ್ಯಮಟ್ಟದ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಪೊಲೀಸರ ಮೂಲಕ ಹೆದರಿಸುವ ಪ್ರಯತ್ನವಾಗುತ್ತಿದೆ. ಅದರೆ ಇದಕ್ಕೆ ನಾವು ಹೆದರುವುದಿಲ್ಲ ಎಂದರು. ಇದು ಕಾಂಗ್ರೆಸ್ ಹೋರಾಟವಲ್ಲ: ರೈತರ ಹೋರಾಟ. ಎಲ್ಲಿ ಪೊಲೀಸರು ತಡೆಯುತ್ತಾರೋ ಅಲ್ಲೇ ರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿ ಎಂದು ಸೂಚನೆ ನೀಡಿದ್ದೇನೆ ಎಂದರು. ಇನ್ನು ಕಾಂಗ್ರೆಸ್ ನಾಯಕರ ಬಗ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಹೇಳಿಕೆ ವಿಚಾರ. ಜೆಪಿ ನಡ್ಡಾಗೆ ಮಾತನಾಡುವ ಶಕ್ತಿ ನೀಡಿದ್ದೇ ಕಾಂಗ್ರೆಸ್ ಎಂದು ಡಿ.ಕೆ ಶಿವಕುಮಾರ್ ಟಾಂಗ್ ನೀಡಿದರು. …. : – , . 20, 2021 (..): . .. “ , ’ ”.“ . - . . , ’ ,” .“ ’ , ’ . . .. ’ , .. .: . , ’ / .. / / : - – - – .