ದೇವೇಗೌಡರ ಕುಟುಂಬದ ಆಸ್ತಿ ಪೆನ್​ ಡ್ರೈವ್: ಹೆಚ್ ಡಿಕೆ ಹೇಳಿಕೆಗೆ ಡಿ.ಕೆ ಸುರೇಶ್ ತಿರುಗೇಟು. ಬೆಂಗಳೂರು, ಮೇ, 2, 2024 (..):ತಮ್ಮ ಕುಟುಂಬವನ್ನ ‘420 ಕುಟುಂಬ’ ಎಂಬ ಟೀಕಿಸಿದ್ದ ಮಾಜಿ ಸಿಎಂ ಹೆಚ್. ​ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿರುವ ಸಂಸದ ಡಿ.ಕೆ ಸುರೇಶ್, ದೇವೇಗೌಡರ ಕುಟುಂಬದ ಆಸ್ತಿ ಪೆನ್​ ಡ್ರೈವ್. ಇನ್ನು ತೆನೆ ಹೊತ್ತ ಮಹಿಳೆ ಪೆನ್​ಡ್ರೈವ್ ಹೊರಬೇಕಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. ಈ ಕುರಿತು ಇಂದು ಮಾತನಾಡಿದ ಡಿ.ಕೆ ಸುರೇಶ್, ನಾನು ಅವರ ಕುಟುಂಬವನ್ನು 420 ಎಂದು ಕರೆಯುವುದಿಲ್ಲ. ಏಕೆಂದರೆ ಅದು ಮಾಜಿ ಪ್ರಧಾನಿಗಳ ಕುಟುಂಬ. ದೇವೇಗೌಡರ ಕುಟುಂಬದ ಆಸ್ತಿ ಪೆನ್​ಡ್ರೈವ್​. ಇನ್ನು ತೆನೆ ಹೊತ್ತ ಮಹಿಳೆ ಪೆನ್​ಡ್ರೈವ್ ಹೊರಬೇಕಾಗುತ್ತದೆ ಎಂದು ಲೇವಡಿ ಮಾಡಿದರು. ಎಲ್ಲವನ್ನೂ ದೇಶ ಹಾಗೂ ರಾಜ್ಯದ ಜನ ಗಮನಿಸುತ್ತಿದ್ದಾರೆ. ಬೇಕಿದ್ದರೆ ಅವರಿಗೆ ಮನಸ್ಸಿಗೆ ಬಂದಹಾಗೆ ಬೈದುಕೊಳ್ಳಲಿ. ಹಾಸನದ ಹೆಣ್ಣುಮಕ್ಕಳ ಮರ್ಯಾದೆ ಉಳಿಸಬೇಕು ಅಷ್ಟೇ. ನಾವು ಅವರನ್ನ ಕೆಣಕಿಲ್ಲ ಎಂದು ಡಿ.ಕೆ ಸುರೇಶ್ ತಿಳಿಸಿದರು. : , , ,