ಯತ್ನಾಳ್ ಬಾಯಿ ಮುಚ್ಚದೇ ಇದ್ರೆ ಕ್ರಮ- ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಎಚ್ಚರಿಕೆ… ಉಡುಪಿ,ಜನವರಿ ,19,2021(..):ಬಸನಗೌಡನಪಾಟೀಲ್ ಯತ್ನಾಳ್ ಬಾಯಿ ಮುಚ್ಚದೆ ಇದ್ದರೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಎಚ್ಚರಿಕೆ ನೀಡಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗ ಹೇಳಿಕೆ ಕುರಿತು ಪುತ್ತೂರಿನಲ್ಲಿ ಇಂದು ಮಾತನಾಡಿದ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ, ಈ ಹಿಂದೆ ನಾನು ರಾಜ್ಯಾಧ್ಯಕ್ಷನಾಗಿದ್ದಾಗಲೂ ಯತ್ನಾಳ್ ಇದೇ ರೀತಿ ವರ್ತನೆ ತೋರುತ್ತಿದ್ದರು. ಹೀಗಾಗಿ ಅವರನ್ನ ಪಕ್ಷದಿಂದ ಉಚ್ಛಾಟನೆ ಮಾಡಿದ್ಧೆ. ಸಚಿವ ಸ್ಥಾನಕ್ಕೆ ಈ ರೀತಿ ಮಾಡುತ್ತಿರುವ ಆರೋಪವಿದೆ ಎಂದರು. ಯತ್ನಾಳ್ ನಾಯಕರಿಗೆ ಸಲಹೆ ಕೊಡುವುದನ್ನ ನಿಲ್ಲಿಸಲಿ. ಯತ್ನಾಳ್ ಸಲಹೆ ಕೇಳಿವಂತೆ ಸ್ಥಿತಿ ಪಕ್ಷಕ್ಕೆ ಇಲ್ಲ. ಈ ವಿಚಾರ ಕೇಂದ್ರ ನಾಯಕರ ಗಮನಕ್ಕೆ ತಂದಿದ್ದೇವೆ. ಅಸಮಾಧಾನವಿದ್ದರೇ ವರಿಷ್ಠರ ಗಮನಕ್ಕೆ ತರಲಿ. ಆದರೆ ಯತ್ನಾಳ್ ಸಮಾಧಾನ ಪಡಿಸುವ ಪ್ರಶ್ನೆಯೇ ಇಲ್ಲ ಎಂದು ಡಿವಿ ಸದಾನಂದಗೌಡ ಟಾಂಗ್ ನೀಡಿದರು. : ’ - – - - -.