“ಮಹಾರಾಷ್ಟ್ರಕ್ಕೂ ಪಾಕ್ ಸ್ಥಿತಿ ಬಂದಿದೆ” : ಸಚಿವ ಆರ್.ಅಶೋಕ್ ಕಿಡಿ ಬೆಂಗಳೂರು,ಜನವರಿ,18,2021(..) :ಪಾಕಿಸ್ಥಾನದಲ್ಲಿ ಜನ ಬೆಂಬಲ ಕಳೆದುಕೊಂಡಾಗ ಇಮ್ರಾನ್ ಖಾನ್ ಈ ರೀತಿಯ ಹೇಳಿಕೆ ನೀಡುತ್ತಿದ್ದರು. ಈಗ ಮಹಾರಾಷ್ಟ್ರಕ್ಕೂ ಪಾಕ್ ಸ್ಥಿತಿ ಬಂದಿದೆ. ಉದ್ಧವ್ ಠಾಕ್ರೆ ತೆವಲಿಗೆ ಮಾತನಾಡುತ್ತಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಕಿಡಿಕಾರಿದ್ದಾರೆ.ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಗಡಿವಿವಾದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ತಂಟೆಗೆ ಬರಬೇಡಿ. ಹೀಗಾಗಿಯೂ ಬಂದರೆ, ನಾವು ಆಂಜನೇಯ ರೂಪ ತಾಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. :-----.