“ಗೊಲ್ಲ, ಕ್ಷೌರಿಕ, ಮಡಿವಾಳ ಸಮುದಾಯಗಳಿಗೂ ಎಸ್ಟಿ ಮೀಸಲಾತಿ ಸಿಗಬೇಕು” : ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರು,ಜನವರಿ,17,2021(..): ಎಲ್ಲರೂ ಗುಂಪು ಸೇರಿಕೊಂಡು ಈಶ್ವರಪ್ಪನನ್ನು ಹಿಡಿದುಕೊಂಡಿದ್ದಾರೆ. ಕುರುಬ ಸಮುದಾಯ ಮಾತ್ರವಲ್ಲ, ಟ್ರೈಬಲ್ ಕ್ಯಾರೆಕ್ಟರ್ ಇರುವ ಎಲ್ಲ ಸಮುದಾಯಗಳಿಗೂ ಎಸ್ಟಿ ಮೀಸಲಾತಿ ಸಿಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.ಗೊಲ್ಲ, ಕ್ಷೌರಿಕ, ಮಡಿವಾಳ ಸಮುದಾಯಗಳಿಗೂ ಎಸ್ಟಿ ಮೀಸಲಾತಿ ಸಿಗಬೇಕು. ಕುಲಶಾಸ್ತ್ರ ಅಧ್ಯಯನ ಆಧರಿಸಿ ಮೀಸಲಾತಿಯನ್ನು ಕೇಂದ್ರ ಸರ್ಕಾರ ಆದೇಶ ಮಾಡಬೇಕು ಅದನ್ನು ಬಿಟ್ಟು ಹೋರಾಟ ಮಾಡುವುದರಲ್ಲಿ ಅರ್ಥವಿಲ್ಲ. ರಿಪೋರ್ಟ್ ಬರದೇ ಪಾದಯಾತ್ರೆ ಮಾಡಿದರೆ ಏನು ಪ್ರಯೋಜನ? ಎಂದು ಪ್ರಶ್ನಿಸಿದರು.ಪರ್ಮಲ್ ಮಿನಿಸ್ಟ್ರು ಈಶರಪ್ಪ ಇದ್ದಾರಲ್ಲ. ಅವರೇ ಶಿಫಾರಸು ಮಾಡಿಸಲಿ. ಸುಮ್ಮನೆ ಸ್ವಾಮೀಜಿಗಳನ್ನು ಯಾಕೆ ನಡೆಸಿ ತೊಂದರೆ ಕೊಡುತ್ತೀರಿ. ಪಾದಯಾತ್ರೆ ನನ್ನ ವಿರುದ್ಧ ಕುರುಬರನ್ನು ಎತ್ತಿಕಟ್ಟುವ ಹುನ್ನಾರವಾಗಿದೆ. ಆ ಹೋರಾಟದ ಹಿಂದೆ ಆರ್‌ಎಸ್‌ಎಸ್ ಇದೆ. ಅವರು ಪಾದಯಾತ್ರೆಗೂ ದುಡ್ಡು ಕೊಡುತ್ತಿದ್ದಾರೆ ಎಂದು ಗಭೀರ ಆರೋಪ ಮಾಡಿದರು. :---- - - -