ಹೋರಾಟಕ್ಕೆ ಸಿದ್ಧ: ಮಹಾರಾಷ್ಟ್ರಕ್ಕೆ ಒಂದು ಅಡಿ ಜಾಗವನ್ನೂ ಕೊಡಲ್ಲ- ಉದ್ಧವ್ ಠಾಕ್ರೆ ವಿರುದ್ಧ ವಾಟಾಳ್ ನಾಗರಾಜ್ ಆಕ್ರೋಶ… ಬೆಂಗಳೂರು,ಜನವರಿ,18,2021(..):ಮರಾಠಿ ಮಾತನಾಡುವ ಪ್ರದೇಶಗಳು ನಮಗೆ ಸೇರಿದ್ದು ಕೆಲ ಭಾಗಗಳನ್ನ ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಟ್ವೀಟ್ ಮಾಡಿ ಹೇಳಿಕೆ ನೀಡಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ. ಈ ಹೇಳಿಕೆ ಕುರಿತು ಮಾತನಾಡಿರುವ ವಾಟಾಳ್ ನಾಗರಾಜ್, ನಾವು ಹೋರಾಟ ಮಾಡಲು ಸಿದ್ಧರಿದ್ದೇವೆ. ಬೆಳಗಾವಿಗೆ ಹೋಗಿ ಹೋರಾಟ ಮಾಡುತ್ತೇವೆ.ಕನ್ನಡಕ್ಕಾಗಿ ನಾವು ಜೈಲಿಗೆ ಹೋಗಲೂ ಸಿದ್ಧ. ಮಹಾರಾಷ್ಟ್ರಕ್ಕೆ ಒಂದು ಅಡಿ ಜಾಗವನ್ನೂ ಬಿಟ್ಟುಕೊಡುವುದಿಲ್ಲ ಎಂದು ಹೇಳಿದರು. ಸಿಎಂ ಬಿಎಸ್ ವೈಗೆ ಶಕ್ತಿ ಇಲ್ಲ. ಮರಾಠಿ ಸಭೆಗಳಿಗೆ ಅವಕಾಶ ಕೊಡಬಾರದು. ಉದ್ಧವ್ ಠಾಕ್ರೆ ಕರ್ನಾಟಕ್ಕೆ ಬರದಂತೆ ತಡೆಯಬೇಕು ಎಂದು ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು. : - – - –-