ಹೆಚ್ಚು ವಿವಾದಕ್ಕೆ ಒಳಗಾದ ರಾಜಕಾರಣಿ ನಾನೇ : ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರು,ಜನವರಿ,17,2021(..): ಹೆಚ್ಚು ವಿವಾದಕ್ಕೆ ಒಳಗಾದ ರಾಜಕಾರಣಿ ನಾನೇ. ಗೋಮಾಂಸ ಸೇವನೆ ಅವರವರ ಆಹಾರದ ಹಕ್ಕು. ಸಮಾಜ ಒಡೆಯುವ ಕೆಲಸ ಮಾಡಬೇಡಿ ಎಂದಿದ್ದೆ ಇದನ್ನು ವಿವಾದ ಮಾಡಿದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ಒಂದು ಹಸು, ಎಮ್ಮೆ, ಎತ್ತು ಸಾಕಲು ದಿನಕ್ಕೆ 7 ಕೆಜಿ ಮೇವು ಬೇಕು. ತಿಂಗಳಿಗೆ 3 ಸಾವಿರ ಬೇಕು. ಸಾಧ್ಯವಾದಷ್ಟು ಸತ್ಯ ಹೇಳುವುದಕ್ಕೆ ಪ್ರಯತ್ನಿಸುತ್ತೇನೆ, ಹಳ್ಳಿ ಭಾಷೆಯಲ್ಲಿ ಮಾತಾಡುತ್ತೇನೆ, ಅದಕ್ಕೆ ಆರ್ ಎಸ್ ಎಸ್ ಅವರು ನನ್ನ ಹೇಳಿಕೆಗೆ ರಂಗು,ರಂಗು ಬಣ್ಣ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು. ಇತ್ತೀಚೆಗೆ ಹನುಮ ಹುಟ್ಟಿದ ದಿನ ಗೊತ್ತಿಲ್ಲ, ನಿಮಗೆ ಗೊತ್ತಿದ್ದರೆ ಹೇಳಿ ಎಂದಿದ್ದಕ್ಕೆ ಅದನ್ನು ವಿವಾದ ಮಾಡಿದರು. :-------