ಮೂಲ ಬಿಜೆಪಿಗರನ್ನು ಕಡೆಗಣಿಸಲಾಗುತ್ತಿದೆ : ಬಿಜೆಪಿ ನಾಯಕಿ ದೀಪಾ ಕುಡಚಿ ಬೆಳಗಾವಿ,ಜನವರಿ,17,2021(..): ಮೂಲ ಬಿಜೆಪಿಗರನ್ನು ಕಡೆಗಣಿಸಲಾಗುತ್ತಿದೆ. ಇತ್ತೀಚೆಗೆ ಬಂದವರಿಗೆ ಅವಕಾಶ ನೀಡಲಾಗುತ್ತಿದೆ. ಈ ಕುರಿತು ವರಿಷ್ಠರಿಗೆ ದೂರು ನೀಡಲಾಗುವುದು ಎಂದು ಬೆಳಗಾವಿ ಲೊಸಕಾಭಾ ಟಿಕೆಟ್ ಆಕಾಂಕ್ಷಿ ದೀಪಾ ಕುಡಚಿ ಆಕ್ರೋಶವ್ಯಕ್ತಪಡಿಸಿದ್ದಾರೆ.ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನಕ್ಕೆ ಸ್ವಾಗತ ಕೋರುವುದಕ್ಕೆ ಏರ್ ಪೋರ್ಟ್ ಗೆ ಹಿರಿಯ ನಾಯಕರಿಗೆ ಅವಕಾಶ ನೀಡದೇ, ಇತ್ತೀಚೆಗೆ ಬಂದವರಿಗೆ ಅವಕಾಶ ಕಲ್ಪಿಸಿರುವುದಕ್ಕೆ ಅವರು ಕಿಡಿಕಾರಿದರು. 20 ವರ್ಷದಿಂದ ಕೆಲಸ ಮಾಡಿದ್ದೇವೆ ಬೆಲೆಯಿಲ್ಲವಾ?, ಪಾಸ್ ಇಲ್ಲದವರಿಗೂ, ಲಿಸ್ಟ್ ನಲ್ಲಿ ಹೆಸರಿಲ್ಲದವರಿಗೂ ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ವರಿಷ್ಠಾಗೆ ದೂರು ನೀಡುತ್ತೇನೆ ಎಂದು ಹೇಳಿದ್ದಾರೆ. :- ----