ನನಗೆ ಯಾವ ಸಿಡಿ ಬಗ್ಗೆಯೂ ಗೊತ್ತಿಲ್ಲ: ನನಗೆ ಗೊತ್ತಿರುವುದು ಕೋವ್ಯಾಕ್ಸಿನ್ , ಕೊವಿಶೀಲ್ಡ್ ಮಾತ್ರ – ಸಚಿವ ಸುಧಾಕರ್… ಬೆಂಗಳೂರು,ಜನವರಿ,15,2021(..):ನನಗೆ ಯಾವ ಸಿಡಿ ಬಗ್ಗೆಯೂ ಗೊತ್ತಿಲ್ಲ. ನನಗೆ ಗೊತ್ತಿರುವುದು ಕೋವ್ಯಾಕ್ಸಿನ್ , ಕೊವಿಶೀಲ್ಡ್ ಮಾತ್ರ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಸಿಎಂ ಬಿಎಸ್ ವೈ ವಿರುದ್ದ ಸಿಡಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ನನಗೆ ಯಾವ ಸಿಡಿ ಬಗ್ಗೆಯೂ ಗೊತ್ತಿಲ್ಲ. ಸಿಡಿ ಬಗ್ಗೆ ಯಾರು ಹೇಳಿದ್ದಾರೋ ಅವರನ್ನೇ ಕೇಳಿ. ನನಗೆ ಗೊತ್ತಿರುವುದು ಕೋವ್ಯಾಕ್ಸಿನ್ , ಕೊವಿಶೀಲ್ಡ್ ಮಾತ್ರ ಎಂದು ಹೇಳಿದರು. ಇನ್ನು ಹೆಚ್.ವಿಶ್ವನಾಥ್ ದೊಡ್ಡವರು. ಅವರ ಹೇಳಿಕೆಗೆ ಪ್ರತಿಕ್ರಿಯೆ ಕೊಡುವಷ್ಟು ದೊಡ್ಡವನು ನಾನಲ್ಲ ಎಂದು ಸಚಿವ ಸುಧಾಕರ್ ತಿಳಿಸಿದರು. : ’ - - - - - …