ನ್ಯೂಜಿಲ್ಯಾಂಡ್’ನಲ್ಲೂ ದಾಖಲೆ ಬರೆದ ವಿಜಯ್ ‘ಮಾಸ್ಟರ್’ ! ಬೆಂಗಳೂರು, ಜನವರಿ 15, 2020 (..):ವಿಜಯ್ ಹಾಗೂ ವಿಜಯ್ ಸೇತುಪತಿ ನಟನೆಯ ಮಾಸ್ಟರ್ ಚಿತ್ರ ಮೊದಲ ದಿನವೇ ದಾಖಲೆ ಬರೆದಿದೆ. ಬಿಡುಗಡೆಯ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಗಳಿಸಿ ದಾಖಲೆ ನಿರ್ಮಿಸಿದೆ ಮಾಸ್ಟರ್. ಈ ತಮಿಳುನಾಡಿನಾದ್ಯಂತ ಬಿಡುಗಡೆಯಾಗಿದ್ದು, ಈ ಚಿತ್ರದ ಮೊದಲ ದಿನ ಚೆನ್ನೈನಲ್ಲಿ 1.21 ಕೋಟಿ ರೂ ಸಂಗ್ರಹಿಸಿದೆ ಎನ್ನಲಾಗಿದೆ. ನ್ಯೂಜಿಲ್ಯಾಂಡ್ ನಲ್ಲಿ ಮೊದಲ ದಿನದ ಸಂಗ್ರಹ ಸುಮಾರು 30ಲಕ್ಷ ರೂ. ಈ ಮೂಲಕ ವಿದೇಶದಲ್ಲಿ ಹೆಚ್ಚು ಗಳಿಸಿದ ಮೊದಲ ತಮಿಳು ಚಿತ್ರ ಎಂಬ ದಾಖಲೆಯನ್ನೂ ಮಾಸ್ಟರ್ ನಿರ್ಮಿಸಿದೆ.