“ಬೇರೆ ಪಕ್ಷದಿಂದ ಬಂದವರಿಗೆ ಸೂಕ್ತಸ್ಥಾನಮಾನ ಅನಿವಾರ್ಯ” : ಸಚಿವ ಕೆ.ಎಸ್.ಈಶ್ವರಪ್ಪ ಶಿವಮೊಗ್ಗ,ಜನವರಿ,15,2021(..): ಬೇರೆ ಪಕ್ಷದಿಂದ ಬಂದವರಿಗೆ ಸೂಕ್ತಸ್ಥಾನಮಾನ ಅನಿವಾರ್ಯ. ಅವರು ಬರದಿದ್ದರೆ ಯಾರು ಮಂತ್ರಿ ಆಗಲು ಸಾಧ್ಯವಿಲ್ಲ. ಬಿಜೆಪಿ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾಗಿತ್ತು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಸಚಿವ ಸಂಪುಟ ವಿಸ್ತರಣೆ ಬಳಿಕ ಅಸಮಾಧಾನ ಸಂಬಂಧಿಸಿದಂತೆ ಮಾತನಾಡಿದ ಅವರು, ಬಹಿರಂಗ ಹೇಳಿಕೆಗಳಿಂದ ಪಕ್ಷಕ್ಕೆ ಹಾನಿ, ಮುಜುಗರವಾಗುತ್ತದೆ. ಕೃಪೆ- internetಸಂಕ್ರಮಣದ ಬಳಿಕ ಸಿಡಿ ಬ್ಲಾಸ್ಟ್ ಆಗುತ್ತೆಂಬ ಹೇಳಿಕೆಗಳಿಂದ ಬೇಸರವಾಗಿದೆ. ಕೂಡಲೇ ಇಂಥ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ತಿಳಿಸಿದ್ದಾರೆ. :-------..