ನಾಳೆಯಿಂದ ಗ್ರಾ.ಪಂ ಅಧ್ಯಕ್ಷ-ಉಪಾಧ್ಯಕ್ಷ ಗಾದಿಗೆ ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆ ಆರಂಭ…. ಮೈಸೂರು,ಜನವರಿ,14,2021(..):ಗ್ರಾಮ ಪಂಚಾಯಿತಿಗಳಿಗೆ ಈಗಾಗಲೇ ಚುನಾವಣೆ ಮುಗಿದಿದ್ದು, ಮೈಸೂರು ಜಿಲ್ಲೆಯಲ್ಲಿ ನಾಳೆಯಿಂದ ಗ್ರಾ.ಪಂ ಅಧ್ಯಕ್ಷ–ಉಪಾಧ್ಯಕ್ಷ ಗಾದಿಗೆ ಮೀಸಲಾತಿ ನಿಗದಿ ಪ್ರಕ್ರಿಯೆ ಆರಂಭವಾಗಲಿದೆ. ಮೈಸೂರು ಜಿಲ್ಲೆಯ ಎಂಟು ತಾಲ್ಲೂಕಿನ 250 ಗ್ರಾ.ಪಂ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನಕ್ಕೆ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಮೀಸಲಾತಿ ನಿಗದಿ ಪ್ರಕ್ರಿಯೆ ನಡೆಯಲಿದೆ. ಮೊದಲ 30 ತಿಂಗಳ ಅವಧಿಗಾಗಿ ಜಿಲ್ಲಾಧಿಕಾರಿ, ಮೀಸಲಾತಿ ನಿಗದಿಗೊಳಿಸಲಿದ್ದು, ಆಯಾ ತಾಲ್ಲೂಕು ಕೇಂದ್ರಗಳಲ್ಲೇ ಪ್ರಕ್ರಿಯೆ ನಡೆಯಲಿದೆ. ಜನವರಿ 15ರಂದು ತಿ.ನರಸೀಪುರ, ನಂಜನಗೂಡು ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಿಗೆ ಮೀಸಲಾತಿ ನಿಗದಿಪಡಿಸಲಾಗುತ್ತದೆ. ಜನವರಿ 16ರಂದು ಮೈಸೂರು, ಕೆ.ಆರ್.ನಗರ, ಜನವರಿ18ರಂದು ಎಚ್.ಡಿ.ಕೋಟೆ, ಸರಗೂರು, ಜನವರಿ 19ರಂದು ಹುಣಸೂರು, ಪಿರಿಯಾಪಟ್ಟಣ ತಾಲೂಕಿನಲ್ಲಿ ಮಿಸಲಾತಿ ನಿಗದಿ ಪ್ರಕ್ರಿಯೆ ನಡೆಯಲಿದೆ. 8 ಬಾರಿಯ ಮೀಸಲಾತಿ ಪರಿಗಣಿಸಿ ಪ್ರಸಕ್ತ ಮೀಸಲಾತಿ ಪಟ್ಟಿ ತಯಾರಿ ಮಾಡಲಿದ್ದಾರೆ. ….. - , . 14, 2021 (..): - . 250 - , . 30 . . 15, , .. , . 16 .., . 18, , . 19. 8 .: - / / : - –- ----.