ಬಿಎಸ್ ವೈ ಸಂಪುಟಕ್ಕೆ ಸಪ್ತ ಸಚಿವರ ಸೇರ್ಪಡೆ: ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಬೆಂಗಳೂರು,ಜನವರಿ,13,2021(..):ಅಂತು ಇಂತೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರಾಜ್ಯಸಚಿವ ಸಂಪುಟ ವಿಸ್ತರಣೆ ಮಾಡಿದ್ದು, ಇಂದು ನೂತನ ಸಚಿವರಾಗಿ 7 ಮಂದಿ ಶಾಸಕರು ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ರಾಜಭವನದಲ್ಲಿ ನೆರವೇರಿತು. ನೂತನ ಸಚಿವರಾಗಿ ಶಾಸಕರಾದ ಉಮೇಶ್ ಕತ್ತಿ. ಅರವಿಂದ ಲಿಂಬಾವಳಿ, ಮುರುಗೇಶ್ ನಿರಾಣಿ, ಎಸ್.ಅಂಗಾರ ವಿಧಾನಪರಿಷತ್ ಸದಸ್ಯರಾದ ಸಿಪಿ ಯೋಗೇಶ್ವರ್, ಆರ್.ಶಂಕರ್, ಎಂಟಿಬಿ ನಾಗರಾಜ್ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ವಜುಭಾಯಿ ವಾಲಾರವರು ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧನೆ ಮಾಡಿದರು. ನೂತನ ಸಚಿವರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ರಾಜ್ಯಪಾಲ ವಜುಭಾಯಿ ವಾಲಾ ಅವರು ಶುಭಕೋರಿದರು. …. : -, . 13, 2021 (..): .. . - . , , , . , .. , . , . . .: - / / .. : - –7 - – …