ಹೈದರಬಾದ್ ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ ಸಂಸ್ಥೆ ಜತೆಗೆ ಮೈಸೂರು ವಿವಿ ಒಪ್ಪಂದಕ್ಕೆ ಸಹಿ. ಮೈಸೂರು, ಜ.12, 2021 : (.. ) ತೆಲಂಗಾಣದ ಹೈದರಾಬಾದ್ ಮೂಲದ ಸಿಎಸಐಆರ್‌ನ ಘಟಕ ಪ್ರಯೋಗಾಲಯವಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿಯೊಂದಿಗೆ ರಾಸಾಯನಿಕ ಜೀವಶಾಸ್ತ ವಿಷಯಕ್ಕೆ ಸಂಬಂಧಪಟ್ಟ ಒಪ್ಪಂದಕ್ಕೆ ಮೈಸೂರು ವಿಶ್ವವಿದ್ಯಾಲಯ ಸಹಿ ಹಾಕಿದೆ. ಹೈದರಬಾದ್ ನಲ್ಲಿ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ ಅವರು ವಿಶ್ವವಿದ್ಯಾಲಯದ ಪರವಾಗಿ ಹಾಗೂ ಐಐಸಿಟಿ, ಹೈದರಾಬಾದ್ ಪರವಾಗಿ ಎಸ್.ಚಂದ್ರಶೇಖರ್ ಅವರು ಒಪ್ಪಂದಕ್ಕೆ ಸಹಿ ಹಾಕಿದರು. ಸಿಎಸ್‌ಐಆರ್-ಐಐಸಿಟಿ, ಆಹಾರ, ಆರೋಗ್ಯ, ವಿದ್ಯುತ್ ಹಾಗೂ ಪರಿಸರಗಳಂತಹ ಮಾನವ ಕಲ್ಯಾಣಕ್ಕಾಗಿ ಅಗತ್ಯವಿರುವಂತಹ ವಿವಿಧ ಉತ್ಪನ್ನಗಳಿಗಾಗಿ ನವೀನ ಪ್ರಕ್ರಿಯೆಗಳನ್ನು ಕೈಗೊಳ್ಳುವ ರಾಸಾಯನಿಕ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ನಡೆಸುತ್ತಿರುವ ಒಂದು ಪ್ರತಿಷ್ಠಿತ ಸಂಶೋಧನಾ ಹಾಗೂ ಅಭಿವೃದ್ಧಿ ಕೇಂದ್ರವಾಗಿದೆ. ಈ ಕೇಂದ್ರದಲ್ಲಿ ನೆಡಯುವ ಸಂಶೋಧನೆ ಮತ್ತು ಅಭಿವೃದ್ಧಿ (&) ಕೆಲಸಗಳು ತಂತ್ರಜ್ಞಾನ ಅಭಿವೃದ್ಧಿ, ವರ್ಗಾವಣೆ ಹಾಗೂ ವಾಣಿಜ್ಯೀಕರಣದ ಅಗತ್ಯಗಳನ್ನು ಪೂರೈಸಲು ಸುಸಜ್ಜಿತ ವ್ಯವಸ್ಥೆಗಳನ್ನು ಒಳಗೊಂಡಿದೆ. ಐದು ವರ್ಷಗಳ ಈ ಒಪ್ಪಂದ, ಈ ಕೆಳಕಂಡ ಅಂಶಗಳ ಮೂಲಕ ಸಂಯೋಜನಾತ್ಮಕ ಸಹಕಾರವನ್ನು ಒದಗಿಸುತ್ತದೆ. ೧) ನಿರ್ದಿಷ್ಟ ಆಸಕ್ತಿಯುಳ್ಳ ಕ್ಷೇತ್ರಗಳಲ್ಲಿ ಸಂಯೋಜಿತ ಸಂಶೋಧನಾ ಕಾರ್ಯಕ್ರಮಗಳು: ಸಿಎಸ್‌ಐಆರ್-ಐಐಸಿಟಿ ಹಾಗೂ ಮೈಸೂರು ವಿಶ್ವವಿದ್ಯಾಲಯವು ಜಂಟಿಯಾಗಿ ಪರಸ್ಪರ ಆಸಕ್ತಿಯುಳ್ಳ ಹಾಗೂ ಎರಡೂ ಸಂಸ್ಥೆಗಳಿಗೆ ಲಾಭದಾಯಕವಾಗುವಂತಹ ಸಂಯೋಜನಾತ್ಮಕ ಸಂಶೋಧನಾ ಕಾರ್ಯಕ್ರಮಗಳನ್ನು ಕೈಗೊಳ್ಳಲಿದೆ. ೨) ವಿದ್ಯಾರ್ಥಿ ತರಬೇತಿ ಕಾರ್ಯಕ್ರಮಗಳು: ವಿದ್ಯಾರ್ಥಿಗಳಿಗಾಗಿ ತರಬೇತಿ ಕಾರ್ಯಕ್ರಮಗಳ ಪರಿಶೋಧನೆ ಹಾಗೂ ಸಾಂಸ್ಥಿಕ ಮಾರ್ಗಸೂಚಿಗಳ ಪ್ರಕಾರ ಆಯೋಜನೆ ೩) ಬೋಧಕರ ವಿನಿಮಯ ಕಾರ್ಯಕ್ರಮಗಳು: ಪರಸ್ಪರ ಎರಡೂ ಸಂಸ್ಥೆಗಳಿಗೆ ಲಾಭದಾಯಕವಾಗುವಂಥಹ ಬೋಧಕ ವಿನಿಮಯ ಕಾರ್ಯಕ್ರಮಗಳ ಪರಿಶೋಧನೆ ಹಾಗೂ ಆಯೋಜನೆ ೪) ಉಪಕರಣಗಳ ಸೌಲಭ್ಯ ವಿನಿಮಯ: ಈ ಸೌಲಭ್ಯಗಳನ್ನು ಸಂಸ್ಥೆಗಳ ಮಾರ್ಗಸೂಚಿಗಳ ಪ್ರಕಾರ ಬಳಸಿಕೊಳ್ಳಲಾಗುತ್ತದೆ. ೫) ಜಂಟಿ ಯೋಜನೆಗಳ ಸಲ್ಲಿಕೆ: ಯೋಜನಾ ಪ್ರಸ್ತಾವನೆಗಳನ್ನು ಜಂಟಿಯಾಗಿ ಡಿಬಿಟಿ, ಸಿಎಸ್‌ಐಆರ್, ಡಿಎಸ್‌ಟಿ, ಐಸಿಎಂಆರ್ ಅಥವಾ ಇತರೆ ನಿಧಿ ಒದಗಿಸುವ ಏಜೆನ್ಸಿಗಳಿಗೆ, ಆಯ್ದ ಯೋಜನೆ/ ಅಣುಗಳ ಮುಂದಿನ ಅಧ್ಯಯನಗಳನ್ನು ಕೈಗೊಳ್ಳಲು ಅಗತ್ಯವಿರುವ ಬಾಹ್ಯ ನಿಧಿಗಾಗಿ ಸಲ್ಲಿಸಬಹುದಾಗಿದೆ. ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ, ಆದಿ ಚುಂಚನಗಿರಿ ವಿಶ್ವವಿದ್ಯಾಲಯದ ಸಂಧೋಧನಾ ನಿರ್ದೇಶಕ ಡಾ.ಶೋಭಿತ್ ರಂಗಪ್ಪ, ವಿಜ್ಞಾನ ಭವನದ ಸಂಯೋಜಕ ಡಾ. ಚಂದ್ರ ನಾಯಕ್, ಮಾಲಿಕ್ಯುಲಾರ್ ಬಯಾಲಜಿ ವಿಭಾಗದ ಸಹಾಯಕ ಪ್ರಧ್ಯಾಪಕರಾದ ಡಾ. ಸಿ.ಡಿ. ಮೋಹನ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು. : --- - -- . : , , , . - & , , , & , . (5) :) ​- .) .) .) .) - , , , /.. . , . , , , . . , , , , , , , .