ಮೈಸೂರು ಜಿಲ್ಲೆಯಲ್ಲಿ 234 ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ವಿತರಣೆ…. ಮೈಸೂರು,ಜನವರಿ,12,2021(..):ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್ ಲಸಿಕೆಯನ್ನ ಕೇಂದ್ರ ಸರ್ಕಾರ ಖರೀದಿಸಿ ಎಲ್ಲಾ ರಾಜ್ಯಗಳಿಗೆ ಹಂಚಿಕೆ ಮಾಡುತ್ತಿದ್ದು, ಈ ಮಧ್ಯೆ ರಾಜ್ಯಕ್ಕೆ ಮೊದಲ ಹಂತದಲ್ಲಿ ಕೊರೊನಾ ಲಸಿಕೆಯ 7.95 ಲಕ್ಷ ವೈಲ್ ಗಳು ಪೊರೈಕೆಯಾಗುತ್ತಿದೆ. ಈ ಪೈಕಿ ಸದ್ಯ 6 ಲಕ್ಷ 47 ಸಾವಿರದ 500 ಡೋಸ್ ಲಸಿಕೆ ಬೆಂಗಳೂರಿಗೆ ಆಗಮಿಸಿದ್ದು, ಉಳಿದ ಲಸಿಕೆ ನಾಳೆ ಬೆಳಗಾವಿಗೆ ರವಾನೆಯಾಗಲಿದೆ. ನಂತರ ಕೊವೀಡ್ ಲಸಿಕೆ ವಿತರಣೆ ಅಭಿಯಾನ ಜನವರಿ 16 ರಿಂದ ಆರಂಭವಾಗಲಿದ್ದು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಕೋವಿಡ್ ಲಸಿಕೆ ವಿತರಣೆ ಮಾಡಲಾಗುತ್ತದೆ. ಈ ಮಧ್ಯೆ ಮೈಸೂರು ಜಿಲ್ಲೆಯಲ್ಲಿ ಒಟ್ಟು 234 ಕೇಂದ್ರಗಳಲ್ಲಿ ಲಸಿಕೆ ವಿತರಣೆ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಮೈಸೂರು ಜಿಲ್ಲೆ ಲಸಿಕೆ ಕುರಿತ ಮಾಹಿತಿ ಇಲ್ಲಿದೆ ನೋಡಿ…. ಮೈಸೂರು ಜಿಲ್ಲೆಯಲ್ಲಿ ಒಟ್ಟು ಸಿರಿಂಜ್ ಶೇಖರಣೆ – 70,000 ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಲಸಿಕೆ ಪಡೆಯುವವರ ಸಂಖ್ಯೆ – 33,009. ಈ ಪೈಕಿ ಸರ್ಕಾರಿ ಆರೋಗ್ಯ ಕಾರ್ಯಕರ್ತರು ಸಂಖ್ಯೆ – 14,976 ಖಾಸಗಿ ಆರೋಗ್ಯ ಕಾರ್ಯಕರ್ತರು ಸಂಖ್ಯೆ – 18,033 ಸರ್ಕಾರಿ ನೌಕರರು ಸಂಖ್ಯೆ – ಮೊದಲ ಹಂತದಲ್ಲಿ ಕೇವಲ ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಲಸಿಕೆ ವಿತರಣೆ ಜಿಲ್ಲೆಯಲ್ಲಿ ಒಟ್ಟು ಕೇಂದ್ರಗಳಲ್ಲಿ ಲಸಿಕೆ ವಿತರಣೆ – 234 ಸರ್ಕಾರಿ ಲಸಿಕಾ ಕೇಂದ್ರಗಳು – 162 ಖಾಸಗಿ ಲಸಿಕಾ ಕೇಂದ್ರಗಳು – 72 (26 ಸಂಸ್ಥೆಗಳು) : – -234 – .