ವಿಜಯ್ ಸೇತುಪತಿಗೆ ಜೋಡಿಯಾದ ಕತ್ರಿನಾ ಕೈಫ್ ! ಬೆಂಗಳೂರು, ಜನವರಿ 12, 2020 (..):ನಟಿ ಕತ್ರಿನಾ ಕೈಫ್ ವಿಜಯ್ ಸೇತುಪತಿ ಜೊತೆಯಾಗಿ ನಟಿಸುತ್ತಿದ್ದಾರೆ. ಹೌದು. ನಿರ್ದೇಶಕ ಶ್ರೀರಾಮ್ ರಾಘವ್ ಮುಂದಿನ ಸಿನಿಮಾದಲ್ಲಿ ಕತ್ರಿನಾ ಕೈಫ್ ಹಾಗೂ ವಿಜಯ್ ಸೇತುಪತಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಇನ್ನು ವಿಜಯ್ ಈಗಾಗಲೇ ‘ಮುಂಬೈಕರ್’ ಸಿನಿಮಾದ ಮೂಲಕ ಬಾಲಿವುಡ್‌ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಕತ್ರಿನಾ ಕೈಫ್ ಜೊತೆಗೆ ಹೊಸ ಸಿನಿಮಾಕ್ಕೆ ಸಹಿ ಹಾಕಲಿದ್ದಾರೆ. ಅಮೀರ್ ಖಾನ್ ಜೊತೆಗೆ ‘ಲಾಲ್ ಸಿಂಗ್ ಛಡ್ಡಾ’ ಸಿನಿಮಾದಲ್ಲಿ ವಿಜಯ್ ಸೇತುಪತಿ ನಟಿಸಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ವಿಜಯ್ ಸೇತುಪತಿ ಆ ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂಬುದು ಕನ್ಫರ್ಮ್ ಆಗಿದೆ.