ಬ್ರಿಟನ್ ನಿಂದ ಬಂದ ಐವರಿಗೆ ಕೊರೋನಾ ಸೋಂಕು ದೃಢ… ಬೆಂಗಳೂರು,ಜನವರಿ,11,2021(..):ರಾಜ್ಯದಲ್ಲಿ ಹೊಸ ರೂಪಾಂತರ ಕೊರೋನಾ ಭೀತಿ ಎದುರಾಗಿದ್ದು ಈ ಮಧ್ಯೆ ಲಂಡನ್ ನಿಂದ ಬೆಂಗಳೂರಿಗೆ ಬಂದವರ ಪೈಕಿ ಐದು ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಲಂಡನ್ ನಿಂದ ಇಂದು ಮುಂಜಾನೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದವರನ್ನ ಏರ್ ಪೋರ್ಟ್ ನಲ್ಲಿಯೇ ಕೋವಿಡ್ ಟೆಸ್ಟ್ ಗೆ ಒಳಪಡಿಸಲಾಗಿತ್ತು. ಒಟ್ಟು 247 ಪ್ರಯಾಣಿಕರ ಪೈಕಿ 5 ಮಂದಿಯಲ್ಲಿ ಕೊರೋನಾ ಸೋಂಕು ದೃಢವಾಗಿದೆ. ಇವರಲ್ಲಿ ಪತ್ತೆಯಾದ ಸೋಂಕು ರೂಪಾಂತರ ಕೊರೊನಾ ಸೋಂಕು ಇರಬಹುದೇ ಎಂಬುದು ಇನ್ನು ತಿಳಿದು ಬಂದಿಲ್ಲ. ಪರೀಕ್ಷೆಗಾಗಿ ಸ್ಯಾಂಪಲ್ ನ್ನು ಲ್ಯಾಬ್ ಗೆ ಕಳುಹಿಸಿಕೊಡಲಾಗಿದೆ. : –- 5 --