ಇಂಡಿಯಾ-ಆಸಿಸ್ 3ನೇ ಟೆಸ್ಟ್: ಶತಕ ವಂಚಿತ ರಿಷಬ್ ಪಂತ್ ಸಿಡ್ನಿ, ಜನವರಿ 11, 2020 (..): 3ನೇ ಟೆಸ್ಟ್’ನ ಎರಡನೇ ಇನ್ನಿಂಗ್ಸ್ ನಲ್ಲಿ ರಿಷಬ್ ಪಂತ್ ಶತಕದಂಚಿನಲ್ಲಿ ಎಡವಿದ್ದಾರೆ. ಟೀಂ ಇಂಡಿಯಾ ಸಂಕಷ್ಟದ ಸಂದರ್ಭದಲ್ಲಿ ಉತ್ತಮವಾಗಿ ಆಡಿದ ಪಂತ್ 97 ರನ್ ಗಳಿಸಿ ಕೇವಲ 3 ರನ್ ಗಳ ಅಂತರದಲ್ಲಿ ಶತಕ ವಂಚಿತರಾಗಿದ್ದಾರೆ. 2ನೇ ಇನ್ನಿಂಗ್ಸ್ ನಲ್ಲಿ ತಮಗೆ ಸಿಕ್ಕ 2 ಜೀವದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡ ಪಂತ್ ಪೂಜಾರ ಜತೆ ಉತ್ತಮವಾಗಿ ಇನ್ನಿಂಗ್ಸ್ ಕಟ್ಟಿದ್ದರು. . ಲೈಯಾನ್ ಎಸೆದಲ್ಲಿ ಪ್ಯಾಟ್ ಕಮಿನ್ಸ್ ಗೆ ಕ್ಯಾಚ್ ನೀಡಿ ಪಂತ್ ವಿಕೆಟ್ ಒಪ್ಪಿಸಿದ್ದಾರೆ.