ಸಂಪುಟದಿಂದ ನನ್ನನ್ನ ಕೈ ಬಿಡುವ ಪ್ರಶ್ನೆಯೇ ಇಲ್ಲ- ಸಚಿವ ಹೆಚ್. ನಾಗೇಶ್…. ಬೆಂಗಳೂರು,ಜನವರಿ,11,2021(..):ಸಚಿವ ಸಂಪುಟ ವಿಸ್ತರಣೆ ಅಥವಾ ಪುನರಚನೆ ವೇಳೆ ನನ್ನನ್ನ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಅಬಕಾರಿ ಸಚಿವ ಎನ್.ನಾಗೇಶ್ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಎನ್.ನಾಗೇಶ್, ನನಗೆ ಸಿಎಂ ಮೇಲೆ ನಂಬಿಕೆ ಇದೆ. ನಾನು ಎರಡುವರೆ ವರ್ಷವೂ ಸಚಿವನಾಗಿರುತ್ತೇನೆ. ನನ್ನನ್ನ ಸಂಪುಟದಿಂದ ಕೈಬಿಡುವುದಿಲ್ಲ ಎಂದರು. ಸಮ್ಮಿಶ್ರ ಸರ್ಕಾರ ನನ್ನನ್ನ ಮಂತ್ರಿ ಮಾಡಿತ್ತು. ಆದರೆ ನಾನೇ ಮೊದಲು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಈ ಮೂಲಕ ಬಿಜೆಪಿ ಸರ್ಕಾರ ರಚನೆ ನನ್ನಿಂದಲೇ ಸುಗುಮವಾಗಿದ್ದು. ಹೀಗಾಗಿ ಸಚಿವ ಸಂಪುಟದಿಂದ ನನ್ನನ್ನ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. : - – --- . .