ಬಾಲಿವುಡ್ ನಟಿ ಇಶಾ ಡಿಯೋಲ್ ಇನ್ಸ್ಟಾಗ್ರಾಮ್ ಖಾತೆ ಹ್ಯಾಕ್…. ಬೆಂಗಳೂರು, ಜನವರಿ 11, 2021 (..):ಬಾಲಿವುಡ್ ನಟಿ ಇಶಾ ಡಿಯೋಲ್ ಅವರ ಇನ್ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆಯಂತೆ. ಈ ವಿಷಯವನ್ನು ಸ್ವತಃ ಇಶಾ ಸ್ಪಷ್ಟಪಡಿಸಿದ್ದಾರೆ. ತನ್ನ ಪ್ರೊಫೈಲ್ನಿಂದ ಸಂದೇಶವನ್ನು ಸ್ವೀಕರಿಸಿದಲ್ಲಿ ಅದನ್ನು ಸ್ವೀಕರಿಸಕೂಡದು ಎಂದು ತಮ್ಮ ಫಾಲೋವರ್ಸ್ ಗಳಿಗೆ ತಿಳಿಸಿದ್ದಾರೆ. ಇತ್ತೀಚಿಗೆ ಸೆಲೆಬ್ರೆಟಿಗಳ ಸೋಷಿಯಲ್ ಮೀಡಿಯಾ ಖಾತೆಗಳ ಮೇಲೆ ಹ್ಯಾಕರ್ ಗಳ ಕಣ್ಣುಬಿದ್ದಿದೆ. ಒಬ್ಬರ ನಂತರ ಮತ್ತೊಬ್ಬರ ಖಾತೆಗಳನ್ನು ಹ್ಯಾಕ್ ಮಾಡುತ್ತಿದ್ದಾರೆ. ಇದೀಗ ಇಶಾ ಡಿಯೋಲ್ ಖಾತೆ ಮೇಲೆ ದೃಷ್ಟಿನೆಟ್ಟಿದ್ದಾರೆ. ನಟಿ ಇಶಾ ಡಿಯೋಲ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕೃತಿಸ್ವಾಮ್ಯ ಉಲ್ಲಂಘನೆ ಸಂದೇಶವನ್ನು ಸ್ವೀಕರಿಸಿರುವ ಸ್ಕ್ರೀನ್ಶಾಟ್ ಹಂಚಿಕೊಂಡಿದ್ದಾರೆ.