ನಟ ದರ್ಶನ್ ತೆರೆದಿಟ್ಟ 5ಜಿ ಹಗರಣ! ಅಂಬಾನಿ ವಿರುದ್ಧ ಆಕ್ರೋಶ ಬೆಂಗಳೂರು, ಜನವರಿ 11, 2020 (..):ಉದ್ಯಮಿ ಅಂಬಾನಿ ವಿರುದ್ಧ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಿಡಿಕಾರಿದ್ದಾರೆ. ಥಿಯೇಟರ್ ನಲ್ಲಿ ಶೇ. 100 ಪ್ರೇಕ್ಷಕರಿಗೆ ಇನ್ನೂ ಅನುಮತಿ ನೀಡದೇ ಇರಲು ಅಂಬಾನಿ ಲಾಬಿ ಕಾರಣ ಎಂದು ದೂರಿದ್ದಾರೆ. ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ ದರ್ಶನ್, ಸರ್ಕಾರದ ವಿರುದ್ಧವೂ ದಚ್ಚು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಥಿಯೇಟರ್ ಸಂಪೂರ್ಣ ತೆರೆಯದೇ ಇರುವುದರ ಹಿಂದೆ 5 ಜಿ ನೆಟ್ ವರ್ಕ್ ಕಾರಣ. ಉದ್ಯಮಿ ಅಂಬಾನಿ 5 ಜಿ ನೆಟ್ ವರ್ಕ್ ಲಾಂಚ್ ಮಾಡುತ್ತಿದ್ದಾರೆ. ಇದು ದೊಡ್ಡ ಹಗರಣ ಎನಿಸುತ್ತದೆ ಎಂದಿದ್ದಾರೆ. 5 ಜಿ ನೆಟ್ ವರ್ಕ್ ಕ್ಲಿಕ್ ಆಗಬೇಕೆಂದರೆ ಒಟಿಟಿ ಸಿನಿಮಾಗಳು, ಆನ್ ಲೈನ್ ಸಿನಿಮಾಗಳು ಇರಬೇಕು. ಹೀಗಾಗಿಯೇ ಚಿತ್ರಮಂದಿರಗಳನ್ನು ತೆರೆಯಲು ಸರಕಾರದಿಂದ ಅಡ್ಡಗಾಲು ಹಾಕಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.